ಮಂಗಳವಾರ, ಮಾರ್ಚ್ 28, 2023
33 °C

ಪುದುಚೇರಿಯ ಜರ್ಮನ್ ದಂಪತಿ ಮನೆಯಲ್ಲಿ ಚೋಳರ ಕಾಲದ ವಿಗ್ರಹಗಳು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಪುದುಚೇರಿಯ ಆರೊವಿಲ್ಲೆಯಲ್ಲಿ ಜರ್ಮನ್ ದಂಪತಿ ಮನೆಯಲ್ಲಿ ಚೋಳರ ಕಾಲದ ಬಹುಕೋಟಿ ಮೌಲ್ಯದ ಮೂರು ವಿಗ್ರಹಗಳನ್ನು ತಮಿಳುನಾಡು ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಟರಾಜ, ಅಮ್ಮನ್ ಮತ್ತು ಚಂದ್ರಶೇಖರ ಎಂಬ ಕಂಚಿನ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿಯ ವಿಗ್ರಹ ಪತ್ತೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪುರಾತನ ವಿಗ್ರಹಗಳು ಚೋಳರ ಕಾಲಕ್ಕೆ ಸೇರಿರಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಕೋಟಿ ಬೆಲೆ ಬಾಳುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜರ್ಮನ್ ಪ್ರಜೆ ಮತ್ತು ಅವರ ಪತ್ನಿ ತಮ್ಮ ಮನೆಯ ಆವರಣದಲ್ಲಿ ವಸ್ತುಸಂಗ್ರಹಾಲಯ ಸ್ಥಾಪಿಸಲು ಯೋಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಭಾರತದಿಂದ ಜರ್ಮನಿಗೆ ಪುರಾತನ ವಿಗ್ರಹಗಳನ್ನು ಕಳ್ಳಸಾಗಣೆ ಮಾಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ದಾಳಿ ಮಾಡಲು ಹೋದಾಗ ಜರ್ಮನ್ ಪ್ರಜೆಗಳು ವಿರೋಧಿಸಿದ್ದರು. ಆದರೆ, ನ್ಯಾಯಾಧೀಶರಿಂದ ವಾರಂಟ್‌ ತಂದು ಮಲಗುವ ಕೋಣೆ ತಪಾಸಣೆ ಮಾಡಿದಾಗ ವಿಗ್ರಹಗಳು ಪತ್ತೆಯಾದವು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು