ಸೋಮವಾರ, ಜೂನ್ 21, 2021
21 °C
ಮಂಗಳವಾರ ಮತ್ತೆ ಮೂರು ಶವ ಪತ್ತೆ: ಇನ್ನೂ 9 ಜನ ನಾಪತ್ತೆ

ಇಡುಕ್ಕಿ ಭೂಕುಸಿತ: ಮೃತರ ಸಂಖ್ಯೆ 61ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಡುಕ್ಕಿ: ಇಲ್ಲಿನ ಪೆಟ್ಟಿಮುಡಿ ಎಂಬಲ್ಲಿ ಆ.7ರಂದು ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಮಂಗಳವಾರ ಮತ್ತೆ ಮೂರು ಶವಗಳು ಪತ್ತೆಯಾಗಿದ್ದು, ಇನ್ನೂ 9 ಜನರು ನಾಪತ್ತೆಯಾಗಿದ್ದಾರೆ. 

ಆರು ವರ್ಷದ ಬಾಲಕನ ಶವ ಹಾಗೂ 57 ವರ್ಷದ ವ್ಯಕ್ತಿಯೊಬ್ಬರ ಶವವನ್ನು ಗುರುತಿಸಲಾಗಿದ್ದು, ಮತ್ತೊಂದು ಶವದ ಗುರುತು ಇನ್ನಷ್ಟೇ ಸಿಗಬೇಕಿದೆ. ಚೆನ್ನೈನಿಂದ ನಾಲ್ವರು ಸದಸ್ಯರ ತಂಡವೊಂದು ಎರಡು ಗ್ರೌಂಡ್‌ ಪೆನೆಟ್ರೇಟಿಂಗ್‌ ರಡಾರ್‌(ಜಿಪಿಆರ್‌)ಗಳೊಂದಿಗೆ ಮಂಗಳವಾರ ಮಧ್ಯಾಹ್ನ ಶೋಧ ಕಾರ್ಯಕ್ಕೆ ಸೇರಿಕೊಂಡಿದೆ ಎಂದು ಇಡುಕ್ಕಿ ಜಿಲ್ಲಾ ಕಲೆಕ್ಟರ್‌ ಎಚ್‌.ದಿನೇಶ್‌ ತಿಳಿಸಿದರು. 

ಭೂಕುಸಿತದಲ್ಲಿ 20 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದವು. ಘಟನೆಯಲ್ಲಿ 12 ಜನರನ್ನು ರಕ್ಷಿಸಲಾಗಿದೆ.   ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು