ಸೋಮವಾರ, ನವೆಂಬರ್ 30, 2020
24 °C

ಭಾರತಕ್ಕೆ ಬಂದಿಳಿದ 3 ರಫೇಲ್‌ ಯುದ್ಧವಿಮಾನಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಫೇಲ್ ಯುದ್ಧವಿಮಾನಗಳ ಎರಡನೇ ತಂಡ ಜಾಮ್‌ನಗರದ ವಾಯುನೆಲೆಗೆ ಬುಧವಾರ ಸಂಜೆ ಬಂದಿಳಿಯಿತು. ಫ್ರಾನ್ಸ್‌ನಿಂದ ಹೊರಟ ಮೂರು ವಿಮಾನಗಳು ಎಲ್ಲಿಯೂ ನಿಲುಗಡೆ ಮಾಡದೇ ನೇರವಾಗಿ ಭಾರತಕ್ಕೆ ಬಂದಿವೆ. ಚೀನಾ ಗಡಿ ಸಂಘರ್ಷದ ಈ ವೇಳೆ ಭಾರತಕ್ಕೆ ಬಂದಿರುವ ಈ ವಿಮಾನಗಳು ವಾಯುಪಡೆಗೆ ಬಲ ತುಂಬಿವೆ. 

ಎರಡನೇ ತಂಡದ ಆಗಮನದ ಬಳಿಕ ಭಾರತದಲ್ಲಿ ರಫೇಲ್ ಯುದ್ಧವಿಮಾನಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಐದು ವಿಮಾನಗಳ ಮೊದಲ ತಂಡ ಜುಲೈ 29ರಂದು ಭಾರತಕ್ಕೆ ಆಗಮಿಸಿತ್ತು. ಫ್ರಾನ್ಸ್‌ನ ಡಾಸೊ ಕಂಪನಿಯ ಜತೆ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದವಾಗಿತ್ತು. ಖರೀದಿ ಮೊತ್ತ ₹59 ಸಾವಿರ ಕೋಟಿ. 

ಇತ್ತೀಚೆಗೆ ಸೇರ್ಪಡೆಗೊಂಡ ಐದು ರಫೇಲ್ ವಿಮಾನಗಳು ಪೂರ್ವ ಲಡಾಖ್‌ನಲ್ಲಿ ನಿಯೋಜನೆಗೊಂಡಿವೆ. ಸುಖೋಯ್, ಜಾಗ್ವಾರ್ ಸೇರಿದಂತೆ ಮುಂಚೂಣಿ ಯುದ್ಧವಿಮಾನಗಳನ್ನು ಲಡಾಖ್‌ನ ವಾಯುನೆಲೆಗಳಲ್ಲಿ ಸೇನೆ ನಿಯೋಜಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು