ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಪ್ರಶ್ನಿಸಿದ್ದ ಶಾಸಕಿ ವೈಶಾಲಿ ದಾಲ್ಮಿಯಾರನ್ನು ಹೊರದಬ್ಬಿದ ಟಿಎಂಸಿ

Last Updated 22 ಜನವರಿ 2021, 15:28 IST
ಅಕ್ಷರ ಗಾತ್ರ

ಕೊಲ್ಕತ್ತಾ: ಅಸಮಾಧಾನಿತ ಶಾಸಕಿ ವೈಶಾಲಿ ದಾಲ್ಮಿಯಾ ಅವರನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷವು ಗುರುವಾರ ಪಕ್ಷದಿಂದ ಹೊರದಬ್ಬಿದೆ.

ಬ್ಯಾಲಿ ವಿಧಾನಸಭೆ ಕ್ಷೇತ್ರದ ಶಾಸಕಿಯಾದ ವೈಶಾಲಿ, ಟಿಎಂಸಿಯ ಕೆಲ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ಪಕ್ಷದಲ್ಲಿ ಪ್ರಾಮಾಣಿಕತೆಗೆ ಮತ್ತು ಪ್ರಾಮಾಣಿಕರಿಗೆ ಸ್ಥಾನವಿಲ್ಲ ಎಂದೂ ಅವರು ಹೇಳಿದ್ದರು.

ಟಿಎಂಸಿ ಶಿಸ್ತು ಸಮಿತಿ ಶುಕ್ರವಾರ ಸಭೆ ಸೇರಿ ದಾಲ್ಮಿಯಾ ಅವರನ್ನು ಪಕ್ಷದಿಂದ ಹೊರಹಾಕಲು ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಟಿಎಂಸಿಯ ಹಿರಿಯ ಮುಖಂಡ ರಾಜೀವ್‌ ಬ್ಯಾನರ್ಜಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ವೈಶಾಲಿ ಅವರನ್ನು ಉಚ್ಚಾಟಿಸಲಾಗಿದೆ. ಬ್ಯಾನರ್ಜಿ ರಾಜೀನಾಮೆಗೆ ವೈಶಾಲಿ ಅವರು ಪಕ್ಷದ ನಾಯಕತ್ವದ ವಿರುದ್ಧ ದನಿಯೇರಿಸಿದ್ದರು.

ಪಕ್ಷ ತೊರೆಯುತ್ತಿರುವವರು ಮತ್ತು ಪಕ್ಷದ ವಿರುದ್ಧ ಅಸಮಾಧಾನ ಹೊಂದಿರುವವರಿಂದಾಗಿ ಆಡಳಿತಾರೂಢ ಟಿಎಂಸಿ ಸದ್ಯ ರಾಜಕೀಯದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT