ಗುರುವಾರ , ಜೂನ್ 24, 2021
27 °C

ಟಿಎಂಸಿ ನಾಯಕನ ಮೇಲೆ ಗುಂಡಿನ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಿನ್‌ಸುರಾಹ್‌, ಪಶ್ಚಿಮ ಬಂಗಾಳ (ಪಿಟಿಐ): ಟಿಎಂಸಿ ನಾಯಕ, ಬನ್ಸ್‌ಬೆರಿಯಾ ನಗರಸಭೆಯ ಮಾಜಿ ಉಪಾಧ್ಯಕ್ಷ ಆದಿತ್ಯ ನಿಯೋಗಿ ಅವರ ಮೇಲೆ ಅಪರಿಚಿತರು ಮಂಗಳವಾರ ಹೂಗ್ಲಿ ಜಿಲ್ಲೆಯಲ್ಲಿ ಗುಂಡು ಹಾರಿಸಿದ್ದಾರೆ.

‘ತರಕಾರಿ ಖರೀದಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ನಂತರ, ವೈದ್ಯರ ಸಲಹೆಯಂತೆ ಕೋಲ್ಕತ್ತದ ಆಸ್ಪತ್ರೆಗೆ ಒಯ್ಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಟಿಎಂಸಿ ಪಕ್ಷದಲ್ಲಿನ ಆಂತರಿಕ ಕಲಹವೇ ಕಾರಣ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಇದನ್ನು ಟಿಎಂಸಿ ಶಾಸಕ ತಪನ್‌ ದಾಸ್‌ಗುಪ್ತಾ ನಿರಾಕರಿಸಿರುವ, ‘ಬಿಜೆಪಿ ಕಾರ್ಯಕರ್ತರೇ ದಾಳಿ ನಡೆಸಿದ್ದಾರೆ’ ಎಂದಿದ್ದಾರೆ.

ಘಟನೆಯನ್ನು ಖಂಡಿಸಿ ಟಿಎಂಸಿ ಕಾರ್ಯಕರ್ತರು ಬನ್ಸ್‌ಬೇರಿಯಾ ನಗರ ವಿವಿಧೆಡೆ ಪ್ರತಿಭಟಿಸಿದರು. ದುಷ್ಕರ್ಮಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು