ಶುಕ್ರವಾರ, ಅಕ್ಟೋಬರ್ 22, 2021
29 °C

ವಿಧಾನಸಭಾ ಚುನಾವಣೆ ಪ್ರಚಾರ: ₹154 ಕೋಟಿ ವೆಚ್ಚ ಮಾಡಿದ ಟಿಎಂಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ಏಪ್ರಿಲ್‌–ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತನ್ನ ಪ್ರಚಾರ ಕಾರ್ಯಗಳಿಗಾಗಿ ₹154.28 ಕೋಟಿ ವೆಚ್ಚ ಮಾಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದರ ಜತೆಗೇ ನಡೆದ ತಮಿಳುನಾಡು ಮತ್ತು ಪುದುಚೇರಿ ಚುನಾವಣೆಗಳಲ್ಲಿ ಡಿಎಂಕೆ ತನ್ನ ಪ್ರಚಾರ ಕಾರ್ಯಗಳಿಗಾಗಿ ₹114.14 ಕೋಟಿ ವೆಚ್ಚ ಮಾಡಿದೆ ಎಂದು ಆಯೋಗ ತಿಳಿಸಿದೆ. ಪಕ್ಷಗಳು ಮಾಡಿರುವ ವೆಚ್ಚದ ವಿವರವನ್ನು ಆಯೋಗ ಸಾರ್ವಜನಿಕರಿಗೆ ತೆರೆದಿಟ್ಟಿದೆ.‌

ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಎಐಎಡಿಎಂಕೆ ₹ 57.33 ಕೋಟಿ ಖರ್ಚು ಮಾಡಿದೆ.‌

ಓದಿ: 

ಕಾಂಗ್ರೆಸ್ ಪಕ್ಷವು ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ಒಟ್ಟಾಗಿ ₹84.93 ಕೋಟಿ ಖರ್ಚು ಮಾಡಿದೆ. ಈ ಐದು ರಾಜ್ಯಗಳಲ್ಲಿ ಸಿಪಿಐ ಮಾಡಿದ ವೆಚ್ಚ ₹13.19 ಕೋಟಿ.

ಆದರೆ ಬಿಜೆಪಿ ಮಾಡಿದ ವೆಚ್ಚಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಆಯೋಗ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು