ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ತ್ರಿಪುರಾ ಬಿಜೆಪಿ ಶಾಸಕಿಯ ಪಾದ ತೊಳೆ‌ದ ಮಹಿಳೆ

Last Updated 20 ಮೇ 2022, 16:30 IST
ಅಕ್ಷರ ಗಾತ್ರ

ಅಗರ್ತಲಾ: ಮಹಿಳೆಯೊಬ್ಬರು ತ್ರಿಪುರಾ ಬಿಜೆಪಿ ಶಾಸಕಿಯೊಬ್ಬರ ಪಾದ ತೊಳೆಯುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ಬಧಾರ್‌ಘಾಟ್‌ ಕ್ಷೇತ್ರದ ಶಾಸಕಿಯಾಗಿರುವ ಮಿಮಿ ಮಜುಂದಾರ್, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸೂರ್ಯಪರಾಗೆ ಮಂಗಳವಾರ ರಾತ್ರಿ ಭೇಟಿ ನೀಡಿದ್ದರು. ಇದೇ ವೇಳೆ ಮಹಿಳೆಯೊಬ್ಬರು ಅವರ ಪಾದ ತೊಳೆದಿದ್ದಾರೆ ಎನ್ನಲಾಗಿದೆ. ಆ ಮಹಿಳೆಯು ಪ್ರೀತಿಯಿಂದ ತಮ್ಮ ಪಾದ ತೊಳೆದಿರುವುದಾಗಿ ಶಾಸಕಿ ಹೇಳಿಕೊಂಡಿದ್ದಾರೆ.

ಭಾರತಿ ದೇವನಾಥ್ ಎಂಬ ಮಹಿಳೆ ಶಾಸಕಿಯ ಪಾದವನ್ನು ಸೋಪು ಹಾಗೂ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸುತ್ತಿರುವ ದೃಶ್ಯ ವೈರಲ್ ವಿಡಿಯೊದಲ್ಲಿದೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ‘ಪಿಟಿಐ’ ಸುದ್ದಿಸಂಸ್ಥೆ ಖಚಿತಪಡಿಸಿಲ್ಲ.

ಬಧಾರ್‌ಘಾಟ್‌ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಆಗಿದ್ದ ಮಜುಂದಾರ್, 2019ರ ವಿಧಾನಸಭಾ ಉಪಚುನಾವಣೆಗೆ ಟಿಕೆಟ್ ದೊರೆಯುವುದು ಖಚಿತವಾದ ಬಳಿಕ ಬಿಜೆಪಿ ಸೇರಿದ್ದರು.

‘ಆ ಹಿರಿಯ ಮಹಿಳೆ ಪ್ರೀತಿಯಿಂದ ಕಾಲು ತೊಳೆದಿದ್ದಾರೆ. ಅವರದನ್ನು ತಾಯಿಯ ಪ್ರೀತಿಯಿಂದ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡುವ ಶಾಸಕರೊಬ್ಬರನ್ನು ಜನ ಯಾವ ರೀತಿ ಗೌರವಿಸುತ್ತಾರೆ ಎಂಬುದನ್ನು ಇದರಿಂದ ತಿಳಿಯಬಹುದು. ಇಂದಿನ ಜಗತ್ತಿನಲ್ಲಿ ಯಾರಿಂದಲೂ ಬಲವಂತವಾಗಿ ಕಾಲು ತೊಳೆಯಿಸಿಕೊಳ್ಳುವುದು ಅಥವಾ ಅಂಥ ಕೆಲಸ ಮಾಡಿಸಿಕೊಳ್ಳಲಾಗದು’ ಎಂದು ಮಜುಂದಾರ್ ಹೇಳಿದ್ದಾರೆ.

ಪ್ರತಿಪಕ್ಷ ಸಿಪಿಐ(ಎಂ), ಯುವ ಕಾಂಗ್ರೆಸ್ ವಿಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಆಕ್ಷೇಪ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT