ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಕಾಲ್ ಮಾಡಿ ಎಂದ ಟ್ವಿಟರ್ ಎಂಡಿಗೆ ಯುಪಿ ಪೊಲೀಸರು ಕೊಟ್ಟ ಉತ್ತರವೇನು?

ಪರಿಶೀಲಿಸದೇ ಕೋಮು ಭಾವನೆ ಕೆರಳಿಸುವ ವಿಡಿಯೊ ಹಂಚಿಕೆಗೆ ಕಾರಣರಾಗಿದ್ದಾರೆ ಎಂಬ ಆರೋಪ
Last Updated 22 ಜೂನ್ 2021, 6:22 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶೀಲಿಸದೇ ಕೋಮು ಭಾವನೆ ಕೆರಳಿಸುವ ವಿಡಿಯೊ ಹಂಚಿಕೆಗೆ ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಮನೀಶ್ ಅವರಿಗೆ ಎರಡನೇ ನೋಟಿಸ್ ನೀಡಿದ್ದು, ‘ವಿಡಿಯೊ ಕಾಲ್ ಮೂಲಕ ವಿಚಾರಣೆಗೆ ಹಾಜಾರಾಗುವುದಕ್ಕೆ ಅವಕಾಶ ಇಲ್ಲ. ನೀವು ಸ್ವತಃ ಠಾಣೆಗೆ ಬಂದು ವಿಚಾರಣೆ ಎದುರಿಸಬೇಕು‘ ಎಂದು ತಿಳಿಸಿದ್ದಾರೆ.

ಜೂನ್ 5 ರಂದು ಟ್ವಿಟರ್‌ನಲ್ಲಿ ಕೆಲವರು, ‘72 ವರ್ಷದ ಮುಸ್ಲಿಂ ವ್ಯಕ್ತಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಹೇಳು‘ ಎಂದು ಥಳಿಸಿದ್ದಾರೆ ಎನ್ನಲಾದ ವಿಡಿಯೊವನ್ನು ಹಂಚಿಕೊಂಡಿದ್ದರು. ಇದು ವೈರಲ್ ಕೂಡ ಆಗಿತ್ತು. ನಂತರ ಪೊಲೀಸರು ಥಳಿತಕ್ಕೊಳಗಾಗಿದ್ದಾನೆ ಎನ್ನಲಾದ ವೃದ್ಧನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ, ‘ಟ್ವಿಟರ್‌ನಲ್ಲಿರುವ ವಿಡಿಯೋ ಸುಳ್ಳು, ಅದು ನಡೆದಿರುವುದು ಬೇರೆ ಕಾರಣಕ್ಕೆ‘ ಎಂದು ಹೇಳಿದ್ದ.

ಇದರಿಂದ ಸೆಕ್ಸನ್ 166 ರ ಅಡಿ (ಕೋಮು ಭಾವನೆ ಕೆರಳಿಸುವ) ಮನೀಶ್ ಮಹೇಶ್ವರಿ ಸೇರಿದಂತೆ ಕೆಲ ರಾಜಕೀಯ ಮುಖಂಡರು, ಪತ್ರಕರ್ತರ ಮೇಲೆ ಗಾಜಿಯಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಮನೀಶ್ ಮಹೇಶ್ವರಿ ಅವರು, ‘ತಮಗೆ ಠಾಣೆಗೆ ಬಂದು ವಿಚಾರಣೆ ಎದುರಿಸಲು ವಿನಾಯಿತಿ ನೀಡಬೇಕು. ಉಳಿದಂತೆ ಎಲ್ಲ ಸಹಕಾರ ನೀಡುತ್ತೇನೆ‘ ಎಂದು ಮನವಿ ಮಾಡಿದ್ದರು.

ಮನೀಶ್ ಅವರ ಬೇಡಿಕೆಯನ್ನು ಪರಿಶೀಲಿಸಲಾಗುತ್ತದೆ ಎಂದು ಗಾಜಿಯಾಬಾದ್ ಎಸ್‌ಪಿ ಇರಾಜ್ ರಾಜಾ ಹೇಳಿದ್ದರು. ಆದರೆ, ಇದೀಗ ‘ವಿಡಿಯೋ ಕಾಲ್‌ ವಿಚಾರಣೆಗೆ ಅವಕಾಶ ಇಲ್ಲ. ಜೂನ್ 24 ರಂದು ಮನೀಶ್ ಅವರು ಬೆಳಿಗ್ಗೆ 10.30 ಕ್ಕೆ ಠಾಣೆಗೆ ಬಂದು ವಿಚಾರಣೆ ಎದುರಿಸಬೇಕು‘ ಎಂದು ಹೇಳಿದ್ದಾರೆ.ಮನೀಶ್ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT