ಗುರುವಾರ , ಮಾರ್ಚ್ 30, 2023
32 °C

ಮೋದಿ, ಯೋಗಿ ಹತ್ಯೆ: ಟ್ವಿಟರ್ ಬಳಕೆದಾರನಿಂದ ಬೆದರಿಕೆ: ತನಿಖೆ ಶುರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಬಾಂಬ್‌ ಸ್ಫೋಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ವ್ಯಕ್ತಿಯೊಬ್ಬ ಟ್ವಿಟರ್‌ ಮೂಲಕ ಭಾನುವಾರ ಬೆದರಿಕೆ ಹಾಕಿದ್ದು, ಉತ್ತರ ಪ್ರದೇಶ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಪೊಲೀಸ್‌ ಸಹಾಯವಾಣಿ 112 ಮೂಲಕ ಈ ಬೆದರಿಕೆ ಕುರಿತು ಮಾಹಿತಿ ಲಭಿಸಿತು. ಬಳಕೆದಾರನ ಬಗ್ಗೆ ಟ್ವಿಟರ್‌ನಿಂದ ಮಾಹಿತಿ ಕೇಳಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಹಾಗೂ ಬೆದರಿಕೆವೊಡ್ಡಿದ ವ್ಯಕ್ತಿಯ ಅಧಿಕೃತ ಹೆಸರು ಪತ್ತೆಯಾಗುವವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಡಿಸಿಪಿ (ಅಪರಾಧ) ಪ್ರಮೋದಕುಮಾರ್‌ ತಿವಾರಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು