ಭಾನುವಾರ, ಏಪ್ರಿಲ್ 2, 2023
33 °C

ರೋಜ್‌ಗಾರ್‌ ಮೇಳ: ಮೋದಿ ವಿರುದ್ಧ ಆಯೋಗಕ್ಕೆ ಠಾಕ್ರೆ ನೇತೃತ್ವದ ಶಿವಸೇನಾ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ‘ರೋಜ್‌ಗಾರ್ ಮೇಳ’ಕ್ಕೆ (ಉದ್ಯೋಗ ಮೇಳ) ಚಾಲನೆ‌‌‌ ನೀಡಿ 75,000 ಜನರಿಗೆ ನೇಮಕಾತಿ ಪ್ರಮಾಣ ಪತ್ರ ಹಸ್ತಾಂತರಿಸಿದ ಬೆನ್ನಲ್ಲೇ, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದು ರಾಜಕೀಯ ಉದ್ದೇಶದ ನಡೆಯಾಗಿದ್ದು, ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಅದು ಹೇಳಿದೆ.

‘ರೋಜ್‌ಗಾರ್‌ ಮೇಳಗಳು ಅಖಿಲ ಭಾರತ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತವೆ. ನಾಗರಿಕ ಸೇವಾ ನಿಯಮಗಳ ಪ್ರಕಾರ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು ಯಾವುದೇ ನೇಮಕಾತಿ ಪತ್ರ ವಿತರಣೆ ಮಾಡಬೇಕು. ಆದರೆ, ಸಚಿವರು ಅಥವಾ ರಾಜಕೀಯವಾಗಿ ಸಂಬಂಧ ಹೊಂದಿರುವ ವ್ಯಕ್ತಿಗಳು ಹೇಗೆ ನೇಮಕಾತಿ ಪತ್ರ ನೀಡಬಹುದು’ ಎಂದು ಶಿವಸೇನಾ ವಕ್ತಾರ ಕಿಶೋರ್‌ ತಿವಾರಿ ಪ್ರಶ್ನಿಸಿದ್ದಾರೆ.

‘ಆಡಳಿತಾರೂಢ ಪಕ್ಷವೊಂದು ಲಾಭದ ಉದ್ದೇಶದಿಂದ ಕಾರ್ಯರೂಪಕ್ಕೆ ತರುವ ಯೋಜನೆಯು ಅಕ್ರಮ ಮಾತ್ರವಲ್ಲ, ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳು ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಯ ವಿರುದ್ಧವಾದುದು’ ಎಂದು ಅವರು ಆಯೋಗಕ್ಕೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು