ಶುಕ್ರವಾರ, ಮೇ 27, 2022
22 °C

ಆಧಾರ್ ಆಫ್‌ಲೈನ್ ದೃಢೀಕರಣಕ್ಕೆ ಪ್ರಾಧಿಕಾರ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

People at Aadhaar center in Bengaluru. Credit: DH File Photo/S K Dinesh

ನವದೆಹಲಿ: ಆಧಾರ್ ಪ್ರಾಧಿಕಾರ ನೀಡುವ ಡಿಜಿಟಲ್ ಸಹಿ ಮಾಡಿರುವ ದಾಖಲೆಯನ್ನು ಒದಗಿಸಿ, ಇನ್ನು ಆಫ್‌ಲೈನ್‌ನಲ್ಲಿ ಕೂಡ ಬಳಕೆದಾರರು ಆಧಾರ್ ದೃಢೀಕರಣ ಮಾಡಬಹುದಾಗಿದೆ.

ಈ ಕುರಿತಂತೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ, ಆಫ್‌ಲೈನ್ ವ್ಯವಸ್ಥೆ ಮೂಲಕವೂ ಆಧಾರ್ ದೃಢೀಕರಿಸಲು ಅವಕಾಶ ಕಲ್ಪಿಸಿದೆ.

ಯುಐಡಿಎಐ ಈಗಾಗಲೇ ಕ್ಯೂಆರ್ ಕೋಡ್ ದೃಢೀಕರಣ, ಆಧಾರ್ ಪೇಪರ್‌ರಹಿತ ಇ-ಕೆವೈಸಿ ದೃಢೀಕರಣ, ಇ-ಆಧಾರ್ ದೃಢೀಕರಣ ಮತ್ತು ಆಫ್‌ಲೈನ್ ಪೇಪರ್-ಆಧಾರಿತ ದೃಢೀಕರಣ ಮತ್ತು ಇತರ ಆಫ್‌ಲೈನ್ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ.

ಹೊಸ ಮಾದರಿಯಲ್ಲಿ, ಯುಐಡಿಎಐ ನೀಡುವ ಡಿಜಿಟಲ್ ಸಹಿ ಇರುವ ದಾಖಲೆಯನ್ನು, ಆಫ್‌ಲೈನ್ ಇ-ಕೆವೈಸಿ ಸಂದರ್ಭದಲ್ಲಿ ಬಳಸಬಹುದಾಗಿದೆ.

ಅದರಲ್ಲಿ ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆಗಳು ಮತ್ತು ಆಧಾರ್‌ನಲ್ಲಿರುವ ಇತರ ವಿವರ, ಫೋಟೊ ಕೂಡ ಇರಲಿದೆ.

ಉಳಿದಂತೆ, ಒಟಿಪಿ ಆಧಾರಿತ ದೃಢೀಕರಣ ಮತ್ತು ಬಯೋಮೆಟ್ರಿಕ್ಸ್ ದೃಢೀಕರಣ ವ್ಯವಸ್ಥೆಗಳೂ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು