ಸೋಮವಾರ, ಮಾರ್ಚ್ 27, 2023
33 °C
ಸಂಚಾರ ನಿರ್ಬಂಧ ಕೋರಿ ಬರೆದಿದ್ದ ಪತ್ರ ಮಾಧ್ಯಮಗಳಿಗೆ ಸೋರಿಕೆ

ರಿಷಿ ಸುನಾಕ್‌ಗೆ ಹಿಂಬಡ್ತಿಯ ಎಚ್ಚರಿಕೆ ನೀಡಿದ ಬ್ರಿಟನ್‌ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಕೋವಿಡ್‌–19 ನಿಯಂತ್ರಿಸಲು ಜಾರಿಗೊಳಿಸಿರುವ ಸಂಚಾರದ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ಬರೆದಿದ್ದ ಪತ್ರವನ್ನು ಹಣಕಾಸು ಸಚಿವ ರಿಷಿ ಸುನಾಕ್‌ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎನ್ನಲಾದ ಕುರಿತು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗಿರುವ ಹಣಕಾಸು ಖಾತೆಯನ್ನು ವಾಪಸ್‌ ಪಡೆದು ಆರೋಗ್ಯ ಖಾತೆ ನೀಡುವ ಮೂಲಕ ರಿಷಿ ಅವರಿಗೆ ಹಿಂಬಡ್ತಿ ನೀಡುವ ಎಚ್ಚರಿಕೆಯನ್ನು ಜಾನ್ಸನ್‌ ನೀಡಿದ್ದಾರೆ. ರಿಷಿ ಸುನಾಕ್‌ ಭಾರತ ಮೂಲದವರು.

‘ರಿಷಿ ಮುಂದಿನ ಆರೋಗ್ಯ ಸಚಿವರಾಗಬಹುದು. ಅಲ್ಲಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದು’ ಎಂದು ಜಾನ್ಸನ್‌ ಅವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶದ ಆರ್ಥಿಕತೆಗೆ ಧಕ್ಕೆಯಾಗುತ್ತಿರುವುದರಿಂದ ಸಂಚಾರದ ನಿರ್ಬಂಧಗಳನ್ನು ಸಡಿಲಗೊಳಿಸುವುದು ಅಗತ್ಯವಿದೆ ಎಂದು ರಿಷಿ ಸುನಾಕ್‌ ಅವರು ಕಳೆದ ವಾರ ಜಾನ್ಸನ್‌ ಅವರಿಗೆ ಪತ್ರ ಬರೆದಿದ್ದರು.

ಆದರೆ, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾದ ಬಳಿಕವೇ ಜಾನ್ಸನ್‌ ಅವರಿಗೆ ಪತ್ರದ ವಿಷಯ ಗಮನಕ್ಕೆ ಬಂದಿದೆ ಎಂದು ‘ಸಂಡೇ ಟೈಮ್ಸ್‌’ ವರದಿ ಮಾಡಿದೆ

 ಪ್ರಧಾನಿ ಮತ್ತು ಹಣಕಾಸು ಸಚಿವರ ಭಿನ್ನಮತದ ಬಗ್ಗೆ ಹಲವು ದಿನಗಳಿಂದ ವರದಿಯಾಗುತ್ತಿದೆ. ಆದರೆ, ಸಚಿವ ಸಂಪುಟ ಪುನರ್‌ ರಚನೆ ಸದ್ಯಕ್ಕೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು