ಶನಿವಾರ, ಮೇ 28, 2022
22 °C

ಸ್ಪುಟ್ನಿಕ್‌ ಲೈಟ್’ ಲಸಿಕೆ ದಾಸ್ತಾನು ಖರೀದಿಸಿಪ್ರಧಾನಿಗೆ ಬೆಂಗಳೂರಿನ ಕಂಪನಿ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ(ಪಿಟಿಐ): ‘ಸ್ಪುಟ್ನಿಕ್ ಲೈಟ್‌’ ಕೋವಿಡ್‌ ಲಸಿಕೆಯು ಭಾರಿ ಪ್ರಮಾಣದಲ್ಲಿ ದಾಸ್ತಾನು ಇದೆ. ಲಸಿಕೆ ಮೈತ್ರಿಯನ್ವಯ ವಿದೇಶಗಳಿಗೆ ಪೂರೈಸಲು ಇದನ್ನು ಖರೀದಿಸಬೇಕು ಎಂದು ಸ್ಟೆಲಿಸ್‌ ಬಯೊಫಾರ್ಮಾ ಕಂಪನಿ ಕೇಂದ್ರ ಸರ್ಕಾರವನ್ನು ಕೋರಿದೆ.

ಬೆಂಗಳೂರು ಮೂಲದ ಸ್ಟೆಲಿಸ್ ಬಯೊಫಾರ್ಮಾ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ‘ಉಕ್ರೇನ್‌–ರಷ್ಯಾ ಯುದ್ಧದ ಬೆಳವಣಿಗೆಯಿಂದಾಗಿ ಒಂದೇ ಡೋಸ್‌ನ 2.5 ಕೋಟಿ ಲಸಿಕೆ ಮಾರಾಟ ಮಾಡಲು ಆಗಿಲ್ಲ’ ಎಂದು ತಿಳಿಸಿದೆ.

ಕೆಲ ಷರತ್ತಿಗೆ ಒಳಪಟ್ಟು ಸ್ಪುಟ್ನಿಕ್‌ ಲೈಟ್‌ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಈ ವರ್ಷದ ಫೆಬ್ರುವರಿಯಲ್ಲಿ ಅನುಮತಿ ನೀಡಿತ್ತು. ಆದರೆ, ಈ ಲಸಿಕೆಯನ್ನು ದೇಶದಲ್ಲಿ ಸದ್ಯ ಜನತೆಗೆ ನೀಡುತ್ತಿಲ್ಲ.

ಸ್ಟೆಲಿಸ್‌ ಬಯೊಫಾರ್ಮಾದ ಸ್ಥಾಪಕ ಮತ್ತು ನಿರ್ದೇಶಕ ಅರುಣ್‌ ಕುಮಾರ್ ಅವರು ಮೇ 13ರಂದು ಬರೆದಿರುವ ಪತ್ರದಲ್ಲಿ, ‘ಸಂಸ್ಥೆ ದೇಶೀಯವಾಗಿ ಲಸಿಕೆ ಉತ್ಪಾದನೆಗೆ ಅತ್ಯಾಧುನಿಕ ಘಟಕ ಸ್ಥಾಪನೆಗೆ ₹ 700 ಕೋಟಿ ಹೂಡಿಕೆ ಮಾಡಿದೆ’ ಎಂದು ತಿಳಿಸಿದೆ. 

ಲಭ್ಯವಿರುವ ಲಸಿಕೆ ದಾಸ್ತಾನನ್ನು ಕೇಂದ್ರ ಸರ್ಕಾರ ಖರೀದಿಸಬೇಕು. ಇಲ್ಲದಿದ್ದರೆ, ಅದು ನಿರುಪಯೋಗಿ ಆಗಲಿದೆ. ಕಂಪನಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗಲಿದೆ ಎಂದು ಹೇಳಿದೆ. ಲಸಿಕೆಗಳನ್ನು ರಫ್ತು ಮಾಡಲು ಕಂಪನಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು