ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗದ ರಹಿತ ಬಜೆಟ್‌| ಶಾಸಕರಿಗೆ ಟ್ಯಾಬ್ಲೆಟ್ ಖರೀದಿಸಲು ಸೂಚಿಸಿದ ಉ. ಪ್ರ. ಸರ್ಕಾರ

ಉತ್ತರ ಪ್ರದೇಶದಲ್ಲಿ ಬಜೆಟ್ ಅಧಿವೇಶನಕ್ಕೆ ಸಿದ್ಧತೆ, ಆಪಲ್ ಐಪಾಡ್ ಬಳಸಲು ತರಬೇತಿ
Last Updated 6 ಫೆಬ್ರುವರಿ 2021, 11:03 IST
ಅಕ್ಷರ ಗಾತ್ರ

ಲಖನೌ: ಕಾಗದ ರಹಿತ ಬಜೆಟ್‌ ಅಧಿವೇಶನ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಉತ್ತರ ಪ್ರದೇಶ ಸರ್ಕಾರ, ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಟ್ಯಾಬ್ಲೆಟ್‌ಗಳನ್ನು ಖರೀದಿಸುವಂತೆ ತಿಳಿಸಿದೆ.

ರಾಜ್ಯದಲ್ಲಿ 403 ವಿಧಾನಸಭಾ ಸದಸ್ಯರು ಮತ್ತು 100 ವಿಧಾನ ಪರಿಷತ್ ಸದಸ್ಯರಿದ್ದಾರೆ. ಪ್ರತಿ ಶಾಸಕರಿಗೆ ಆಪಲ್ ಐಪಾಡ್ ಖರೀದಿಸಲು ಸರ್ಕಾರ ₹50 ಸಾವಿರ ಹಣ ನೀಡುತ್ತಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ತಿಳಿಸಿದ್ದಾರೆ.

‘ಶಾಸಕರು ಆಪಲ್ ಐಪಾಡ್ ಖರೀದಿಸಬೇಕು. ಅದರ ವೆಚ್ಚವನ್ನು ಮರುಪಾವತಿ ಮಾಡಲಾಗುವುದು‘ ಎಂದು ಅವರು ತಿಳಿಸಿದ್ದಾರೆ.

ಐಪಾಡ್ ಬಳಸುವ ಕುರಿತು ಸಚಿವರು ಈಗಾಗಲೇ ತರಬೇತಿಗೆ ಹಾಜರಾಗಿದ್ದಾರೆ. ಅಧಿವೇಶನಕ್ಕೆ ಮುನ್ನ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೂ ತರಬೇತಿ ಕೊಡಿಸಲಾಗುವುದು ಎಂದು ಅವರು ಹೇಳಿದರು.

ಫೆಬ್ರವರಿ 2 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭವಿಷ್ಯದಲ್ಲಿ ವರ್ಚುವಲ್ ಆಗಿ ಸಂಪುಟ ಸಭೆ ನಡೆಸಬೇಕು. ಇದಕ್ಕಾಗಿ ಸಚಿವರಿಗೆ ತರಬೇತಿ ನೀಡಬೇಕು‘ ಎಂದು ನಿರ್ದೇಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT