ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಅಧಿಸೂಚನೆ: ಜೂನ್‌ 5ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ

Last Updated 3 ಫೆಬ್ರುವರಿ 2022, 15:13 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 861 ಹುದ್ದೆಗಳ ಭರ್ತಿಗಾಗಿ 2022ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಜೂನ್‌ 5ರಂದು ನಡೆಸುವ ಸಂಬಂಧ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ.

ಅಭ್ಯರ್ಥಿಗಳು ಫೆಬ್ರುವರಿ 22ರಂದು ಸಂಜೆ 6ರೊಳಗೆ ಆನ್‌ಲೈನ್‌ನಲ್ಲಿ (www.upsconline.nic.in) ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗಳನ್ನು ಮಾರ್ಚ್ 1 ರಿಂದ ಮಾರ್ಚ್ 7 ರ ಸಂಜೆ 6 ರೊಳಗೆ ಹಿಂಪಡೆಯಬಹುದು.

‘ನಿಗದಿತ ಅವಧಿ ಮುಗಿದ ಬಳಿಕ ಅರ್ಜಿ ಹಿಂಪಡೆಯುವ ಮನವಿಯನ್ನು ಆಯೋಗವು ಸ್ವೀಕರಿಸುವುದಿಲ್ಲ’ ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.

‘ಲಿಂಗ ಸಮತೋಲನವನ್ನು ಪ್ರತಿಬಿಂಬಿಸುವ ಕಾರ್ಯಪಡೆಯನ್ನು ಹೊಂದಲು ಸರ್ಕಾರವು ಶ್ರಮಿಸುತ್ತಿದೆ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT