ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ದಾಳಿ: ಉಕ್ರೇನ್‌ನಲ್ಲಿ ಫಾಕ್ಸ್ ನ್ಯೂಸ್‌ನ ಛಾಯಾಗ್ರಾಹಕ ಸಾವು

Last Updated 15 ಮಾರ್ಚ್ 2022, 16:20 IST
ಅಕ್ಷರ ಗಾತ್ರ

ಕೀವ್: ಅಮೆರಿಕ ಮೂಲದ ಸುದ್ದಿ ಸಂಸ್ಥೆ ಫಾಕ್ಸ್‌ನ್ಯೂಸ್‌ನ ಛಾಯಾಗ್ರಾಹಕ ಪೀರೆ ಜಕ್ರಜೆಸಕಿ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಸಾವಿಗೀಡಾಗಿದ್ಧಾರೆ.

ರಾಜಧಾನಿ ಕೀವ್ ನಗರದ ಹೊರವಲಯದ ಹೊರೆಂಕಾದಲ್ಲಿ ಛಾಯಾಗ್ರಾಹಕರು ಪ್ರಯಾಣಿಸುತ್ತಿದ್ದ ವಾಹನವು ರಷ್ಯಾ ಯೋಧರ ಗುಂಡಿನ ದಾಳಿಗೆ ಸಿಲುಕಿತ್ತು. ಘಟನೆಯಲ್ಲಿ ಜಕ್ರಜೆಸಕಿ ಅಸುನೀಗಿದ್ದು, ಅವರ ಸಹೋದ್ಯೋಗಿ ಬೆಂಜಮಿನ್ ಹಾಲ್ ಗಾಯಗೊಂಡಿದ್ದಾರೆ ಎಂದು ಫಾಕ್ಸ್ ನ್ಯೂಸ್‌ನ ಸಿಇಒ ಸುಸೇನ್ ಸ್ಕಾಟ್ ಹೇಳಿಕೆಯಲ್ಲಿ ತಿಳಿಸಿದ್ಧಾರೆ.

ಬೆಂಜಮಿನ್ ಹಾಲ್ ಸಹ ತೀವ್ರವಾಗಿ ಗಾಯಗೊಂಡಿದ್ದು, ಉಕ್ರೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಕಾಟ್ ತಿಳಿಸಿದ್ದಾರೆ.

‘ಪೀರೆ ಅವರು ಫಾಕ್ಸ್ ನ್ಯೂಸ್ ಯುದ್ಧ ವಲಯದ ಫೋಟೊಗ್ರಾಫರ್ ಆಗಿದ್ದು, ತಮ್ಮು ಸುದೀರ್ಘ ವೃತ್ತಿಜೀವನದಲ್ಲಿ ಇರಾಕ್‌ನಿಂದ ಸಿರಿಯಾ, ಅಫ್ಗಾನಿಸ್ತಾದವರೆಗೆ ಎಲ್ಲ ಯುದ್ಧಗಳ ಕವರೇಜ್ ಮಾಡಿದ್ದಾರೆ ಎಂದು ಸ್ಕಾಟ್ ಹೇಳಿದ್ದಾರೆ.

ಲಂಡನ್ ಮೂಲದ ಪೀರೆ ಕಳೆದ ಫೆಬ್ರುವರಿಯಿಂದ ಉಕ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಭಾನುವಾರ, ರಷ್ಯಾ ದಾಳಿಯಲ್ಲಿ ಅಮೆರಿಕದ ಪತ್ರಕರ್ತನೊಬ್ಬ ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT