ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯು ದ್ವೇಷ, ವಿಭಜನೆಯ ರಾಜಕೀಯ ಮಾಡುತ್ತಿದೆ: ಅಖಿಲೇಶ್ ಯಾದವ್

Last Updated 21 ಫೆಬ್ರುವರಿ 2022, 3:14 IST
ಅಕ್ಷರ ಗಾತ್ರ

ಲಖನೌ: ಭಾರತೀಯ ಜನತಾ ಪಕ್ಷವು (ಬಿಜೆಪಿ) ಉತ್ತರ ಪ್ರದೇಶದಲ್ಲಿ ದ್ವೇಷ ಮತ್ತು ವಿಭಜನೆಯ ರಾಜಕೀಯ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಗೆ ಭಾನುವಾರ (ಫೆಬ್ರುವರಿ 20) ಮೂರನೇ ಹಂತದ ಮತದಾನದ ವೇಳೆ ಮತ ಚಲಾಯಿಸಿ ಮಾತನಾಡಿರುವ ಅಖಿಲೇಶ್, ಹಲವು ಮತಗಟ್ಟೆಗಳಲ್ಲಿ ಅಸಮರ್ಪಕ ನಿರ್ವಹಣೆ ಕಂಡುಬಂದಿದೆ ಎಂದೂ ಆರೋಪಿಸಿದ್ದಾರೆ.

'ನಾನು ಇಂದು ಮತ ಚಲಾಯಿಸಿದ್ದೇನೆ. ಮೂರನೇ ಹಂತದ ಮತದಾನದ ವೇಳೆವಿವಿಧ ಮತಗಟ್ಟೆಗಳಲ್ಲಿ ಅಸಮರ್ಪಕ ನಿರ್ವಹಣೆಯ ಹಲವು ಪ್ರಕರಣಗಳು ವರದಿಯಾಗಿವೆ.ಮತಯಂತ್ರಗಳು ಕೆಟ್ಟಿರುವ ಬಗ್ಗೆ ಹಲವು ಕಡೆ ದೂರುಗಳು ಬಂದಿವೆ. ಆದಾಗ್ಯೂ, ಬಿಜೆಪಿ ವಿಳಂಬ ಧೋರಣೆ ಅನುಸರಿಸುತ್ತಿದೆ.ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದ್ದು, ಜನರನ್ನು ವಿಭಜಿಸುತ್ತಿದೆ' ಎಂದು ದೂರಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಗೆಫೆಬ್ರುವರಿ 20ರಂದು ಮೂರನೇ ಹಂತದ ಮತದಾನ ನಡೆದಿದೆ. 16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ ಶೇ 61.02ರಷ್ಟು ಮಂದಿ ಮತ ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT