ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಯರು ಹರಿದ ಜೀನ್ಸ್‌ ಧರಿಸುವುದು ನಮ್ಮ ಸಂಸ್ಕೃತಿಯೇ?: ತೀರಥ್‌ಸಿಂಗ್‌ ರಾವತ್

Last Updated 18 ಮಾರ್ಚ್ 2021, 1:40 IST
ಅಕ್ಷರ ಗಾತ್ರ

ಲಖನೌ: ‘ಹರಿದ ಜೀನ್ಸ್‌ ಬಟ್ಟೆಯನ್ನು ಮಹಿಳೆಯರು ಧರಿಸುವುದರಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ’ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್‌ ರಾವತ್‌ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ರಾವತ್‌, ಡೆಹ್ರಾಡೂನ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದರು.

‘ಹರಿದ ಜೀನ್ಸ್‌ ಬಟ್ಟೆ ಧರಿಸುವುದು ಮಹಿಳೆಯರಲ್ಲಿ ಜನಪ್ರಿಯವಾಗಿದೆ. ಇದು ನಮ್ಮ ಸಂಸ್ಕೃತಿಯೇ?. ಮಕ್ಕಳು ತಮ್ಮ ಪೋಷಕರಿಂದ ಸಂಸ್ಕೃತಿ ಕಲಿಯಬೇಕು. ಆದರೆ, ಪೋಷಕರು ಹರಿದ ಜೀನ್ಸ್‌ ಧರಿಸಿದರೆ ಅವರಿಂದ ಯಾವ ರೀತಿಯ ಸಂಸ್ಕೃತಿಯನ್ನು ಮಕ್ಕಳು ಕಲಿಯುತ್ತಾರೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯು ತಮ್ಮನ್ನು ಸಮಾಜ ಸೇವಕಿ ಎಂದು ಪರಿಚಯಿಸಿಕೊಂಡಿದ್ದರು. ಆದರೆ ಅವರು ಹರಿದ ಜೀನ್ಸ್‌ ತೊಟ್ಟಿದ್ದರು. ಅದನ್ನು ಗಮನಿಸಿದಾಗ, ಯಾವ ರೀತಿಯ ಸಮಾಜ ಸೇವೆಯನ್ನು ಅವರು ಮಾಡುತ್ತಾರೆ ಎಂದು ಆಶ್ಚರ್ಯವಾಯಿತು’ ಎಂದು ಹೇಳಿದ್ದಾರೆ.

‘ಹೊಸ ತಲೆಮಾರಿನ ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ. ಹರಿದಿರುವ ಜೀನ್ಸ್‌ ಧರಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ’ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT