ಮುಂಬೈ: ಗಾಂಧಿನಗರದಿಂದ ಮುಂಬೈಗೆ ತೆರಳುತ್ತಿದ್ದವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಅತುಲ್ಬಳಿ ಇಂದು ಮತ್ತೆ ಅಪಘಾತಕ್ಕೀಡಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತುಲ್ ಬಳಿ ಗೂಳಿಯೊಂದಕ್ಕೆ ಡಿಕ್ಕಿಯಾಗಿ ಜಖಂಗೊಂಡಿದೆ. ಇದರಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿದ್ದು 15 ನಿಮಿಷ ತಡವಾಗಿ ಮುಂಬೈ ಸೆಂಟ್ರಲ್ ನಿಲ್ದಾಣವನ್ನು ತಲುಪಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯವಾಗಿಲ್ಲ. ಗೂಳಿ ಸತ್ತಿದೆ ಎಂದುಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ವಿಶೇಷವೆಂದರೆ ಇದೇ ರೈಲು ಒಂದೇ ತಿಂಗಳಲ್ಲಿ ಮೂರು ಬಾರಿ ಅಪಘಾತವಾಗಿದೆ. ಮೂರು ಬಾರಿಯೂ ಜಾನುವಾರಗಳಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿವೆ.
ಅ.6 ರಂದು ಎಮ್ಮೆಗಳ ಹಿಂಡಿಗೆ ಗುದ್ದಿ ಹಾನಿಗೀಡಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಅ. 7 ರಂದು ಹಸುವಿಗೆ ಗುದ್ದಿತ್ತು. ಹೀಗಾಗಿ ರೈಲಿನ ಮುಂಭಾಗ ಅಲ್ಪ ಪ್ರಮಾಣದಲ್ಲಿ ಜಖಂಗೊಂಡಿತ್ತು
ರೈಲಿನ ಮುಂಭಾಗವನ್ನು ಶುಕ್ರವಾರವಷ್ಟೇ ದುರಸ್ತಿ ಮಾಡಿ, ರೈಲಿಗೆ ಮರಳಿ ಚಾಲನೆ ನೀಡಲಾಗಿತ್ತು. ದುರಸ್ತಿಯಾದ ಕೆಲದಿನಗಳ ಬಳಿಕ ಈ ಅತ್ಯಾಧುನಿಕ ರೈಲಿಗೆ ಮತ್ತೊಂದು ಅಪಘಾತವಾಗಿದೆ.
‘ವಂದೇ ಭಾರತ್’ ಸರಣಿ ಅಡಿಯಲ್ಲಿ ದೇಶೀಯವಾಗಿ ವಿನ್ಯಾಸಗೊಳಿಸಿ, ತಯಾರಿಸಲಾದ ಸೆಮಿ- ಹೈಸ್ಪೀಡ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30ರಂದು ಚಾಲನೆ ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.