ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಜ್‌ಗರ್‌ ಗಣಿ ಪ್ರಕರಣ: ಸಾಮಾಜಿಕ ಕಾರ್ಯಕರ್ತ, ಕವಿ ವರವರರಾವ್‌ಗೆ ಜಾಮೀನು

Last Updated 23 ಫೆಬ್ರುವರಿ 2021, 12:31 IST
ಅಕ್ಷರ ಗಾತ್ರ

ನಾಗಪುರ: ಸಾಮಾಜಿಕ ಕಾರ್ಯಕರ್ತ, ಕವಿ ವರವರ ರಾವ್ ಅವರಿಗೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು, 2016ರ ಸೂರಜ್‌ಗರ್‌ ಕಬ್ಬಿಣ ಅದಿರು ಗಣಿ ಪ್ರಕರಣ ಸಂಬಂಧ ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ನೀಡಿದೆ.

82 ವರ್ಷದ ವರವರರಾವ್ ಮತ್ತು ವಕೀಲ ಸುರೇಂದ್ರ ಗದ್ಲಿಂಗ್ ಅವರನ್ನು ಗಡಚಿರೋಲಿ ಠಾಣೆ ಪೊಲೀಸರು ಫೆಬ್ರುವರಿ 2019ರಲ್ಲಿ ಬಂಧಿಸಿದ್ದರು. ನಾಗಪುರ ಪೀಠದ ನ್ಯಾಯಮೂರ್ತಿ ಸ್ವಪ್ನಾ ಜೋಷಿ ಜಾಮೀನು ನೀಡಿದರು. ಇದೇ ಕಾರಣ ಆಧರಿಸಿ ಬಾಂಬೆ ಹೈಕೋರ್ಟ್‌ ಸೋಮವಾರ ಎಲ್ಗರ್‌ ಪ್ರಕರಣದಲ್ಲಿ ವರವರ ರಾವ್‌ ಅವರಿಗೆ ಜಾಮೀನು ನೀಡಿತ್ತು.

ವರವರರಾವ್ ಆರೋಗ್ಯದ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ, ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ನೀಡಬೇಕು ಎಂದು ವಕೀಲರಾದ ಫಿರ್ದೋಸ್‌ ಮಿರ್ಜಾ ಮತ್ತು ನಿಹಾಲ್‌ಸಿಂಗ್ ಅವರು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT