ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಮಂಜು ಕವಿದ ವಾತಾವರಣದಿಂದಾಗಿ, ‘ಶೂನ್ಯ ಗೋಚರತೆ'ಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೆಲವು ಪ್ರದೇಶಗಳಲ್ಲಿ 300 ಮೀಟರ್ಗಿಂತ ಹೆಚ್ಚು ದೂರದಲ್ಲಿ ನಡೆಯುವ ವಿದ್ಯಮಾನಗಳು ಕಾಣಿಸುತ್ತಿಲ್ಲ. ಇಷ್ಟು ದಪ್ಪನೆಯ ಮಂಜು ಆವರಿಸಿರುವ ಕಾರಣ ವಾಹನ ಸಂಚಾರರಿಗೂ ತೊಂದರೆಯಾಗಿದೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಚಳಿಗಾಲದಲ್ಲಿ ಇಷ್ಟು ಮಂಜು ಕವಿದಿದೆ.

ಬೆಳಿಗ್ಗೆ 6:30 ಕ್ಕೆ ತುಂಬಾ ದಟ್ಟವಾದ ಮಂಜಿನಿಂದಾಗಿ ಪಾಲಂ ಹವಾಮಾನ ಕೇಂದ್ರದಲ್ಲಿ ‘ಶೂನ್ಯ ಗೋಚರತೆ' ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.

ದೆಹಲಿ ನಗರಕ್ಕೆ ಪ್ರತಿನಿಧಿ ದತ್ತಾಂಶವನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ, ಮಧ್ಯಮ ಪ್ರಮಾಣದಲ್ಲಿ ಮಂಜು ಕವಿದಿರುವುದು ದಾಖಲಾಗಿದ್ದು. ಇದು ಗೋಚರತೆ ಪ್ರಮಾನವನ್ನು 300 ಮೀಟರ್ಗೆ ಇಳಿಸಿತು ಎಂದು ಅವರು ಹೇಳಿದರು. ವಿಮಾನ ಸಂಚಾರಕ್ಕೆ ರನ್ವೇಗಳಲ್ಲಿ ಕನಿಷ್ಠ 800 ಮೀಟರ್ವರೆಗೂ ದಾರಿ ಸ್ಪಷ್ಟವಾಗಿ ಕಾಣುವಂತಿರಬೇಕು ಎಂದು ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಪಶ್ಚಿಮದಿಂದ ಬೀಸುತ್ತಿರುವ ಕಡಿಮೆ ವೇಗದ ಗಾಳಿಯಿಂದಾಗಿ, ನಗರದ ಕೆಲವು ಭಾಗಗಳಲ್ಲಿ ಹೀಗೆ ದಟ್ಟವಾದ ಮಂಜು ಹರಡಲು ಕಾರಣವಾಗಿದೆ ಎಂದು ಶ್ರೀವಾಸ್ತವ್ ಹೇಳಿದರು. ಮಂಗಳವಾರ ಈ ಮಂಜಿನ ಪ್ರಮಾಣ ಕಡಿಮೆಯಾಗಬಹುದು ಎಂದು ಅವರು ಹೇಳಿದರು.

ದೆಹಲಿಯ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.ವಾಯು ಗುಣಮಟ್ಟ ಸೋಮವಾರ ‘ಅತ್ಯಂತ ಕಳಪೆ‘ ಯಾಗಿತ್ತು ಎಂದು ಐಎಂಡಿ ಹೇಳಿದೆ. ಗಾಳಿಯ ವೇಗ ಹೆಚ್ಚಾದರೆ, ವಾಯು ಗುಣಮಟ್ಟ ಸುಧಾರಿಸುವ ಸಾಧ್ಯತೆಯಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.