ಸೋಮವಾರ, ಸೆಪ್ಟೆಂಬರ್ 26, 2022
22 °C

ವಿದರ್ಭಾದಲ್ಲಿ 72 ಗಂಟೆಯಲ್ಲಿ ಏಳು ರೈತರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ 7 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ನೇಮಿಸಿದ ವಸಂತರಾವ್ ನಾಯಕ್ ಶೆಟ್ಟಿ ಸ್ವಾವಲಂಬನ್ ಮಿಷನ್ ಅಧ್ಯಕ್ಷ ಕಿಶೋರ್ ತಿವಾರಿ ತಿಳಿಸಿದ್ದಾರೆ. 

‘2022ರಲ್ಲಿ 1,060 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ ಕಳೆದ 13 ದಿನಗಳಲ್ಲಿ 26 ರೈತರು ಆತ್ಮಹತ್ಯೆ ಮಾಡಿಕೊಂಡರೆ, ಅದರಲ್ಲಿ 14 ಆತ್ಮಹತ್ಯೆಗಳು ಏಳು ದಿನಗಳಲ್ಲಿ ವರದಿಯಾಗಿವೆ’ ಎಂದು ತಿವಾರಿ ಹೇಳಿದರು. ‌

ಈ ಭಾಗದಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಳೆದ 25 ವರ್ಷಗಳಲ್ಲಿ ಪಶ್ಚಿಮ ವಿದರ್ಭದಲ್ಲಿ ಹತ್ತಿ ಮತ್ತು ಸೋಯಾಬೀನ್ ರೈತರಲ್ಲಿ 28 ಸಾವಿರಕ್ಕೂ ಹೆಚ್ಚು ಆತ್ಮಹತ್ಯೆಗಳು ವರದಿಯಾಗಿವೆ. ಆದರೆ, ಈಗ ಪೂರ್ವ ವಿದರ್ಭದಲ್ಲಿ ಭತ್ತದ ರೈತರು ಅದೇ ದಾರಿ ಹಿಡಿದಿದ್ದಾರೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.