ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್‌ ಜೈಲಿನ ಮೇಲ್ವಿಚಾರಕರ ಜೊತೆ ಸತ್ಯೇಂದ್ರ ಜೈನ್‌ ಚರ್ಚೆ: ವಿಡಿಯೊ ಸೋರಿಕೆ

Last Updated 26 ನವೆಂಬರ್ 2022, 5:52 IST
ಅಕ್ಷರ ಗಾತ್ರ

ನವದೆಹಲಿ: ತಿಹಾರ್‌ ಜೈಲಿನೊಳಗೆ ಬಂದೀಖಾನೆಯ ಮೇಲ್ವಿಚಾರಕರ ಜೊತೆ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಅವರು ಚರ್ಚಿಸುತ್ತಿರುವ ಸಿಸಿಟಿವಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎಎಪಿ ನಾಯಕ ಜೈನ್‌ ಅವರು ಜೈಲಿನ ತಮ್ಮ ಕೋಣೆಯೊಳಗೆ ಬಂದೀಖಾನೆಯ ಮೇಲ್ವಿಚಾರಕರ ಜೊತೆ ಚರ್ಚಿಸುತ್ತಿರುವ ಸಿಸಿಟಿವಿ ದೃಶ್ಯವನ್ನು ಬಿಜೆಪಿಯ ಕೆಲವು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಜೈಲಿನೊಳಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವುದು ಮತ್ತು ವಿಶೇಷ ಸವಲತ್ತುಗಳನ್ನು ಪಡೆಯುತ್ತಿರುವುದರ ಸಿಸಿಟಿವಿ ವಿಡಿಯೊ ಸೋರಿಕೆಯಾಗಿವೆ. ಈ ಹಿನ್ನೆಲೆ, ವಿಡಿಯೊಗಳು ಮಾಧ್ಯಮಗಳಿಗೆ ಸೋರಿಕೆಯಾಗುತ್ತಿರುವುದನ್ನು ತಡೆಯುವಂತೆ ಸತ್ಯೇಂದ್ರ ಜೈನ್‌ ದೆಹಲಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

'ಪ್ರಾಮಾಣಿಕ ಸಚಿವ ಜೈನ್‌ ಅವರ ಹೊಸ ವಿಡಿಯೊ ನೋಡಿ. ರಾತ್ರಿ 8 ಗಂಟೆಗೆ ಜೈಲು ಸಚಿವರ ಕೋರ್ಟ್‌ನಲ್ಲಿ ಜೈಲಿನ ಮೇಲ್ವಿಚಾರಕರು ಹಾಜರಾಗಿದ್ದಾರೆ' ಎಂದು ದೆಹಲಿ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಹರೀಶ್‌ ಖುರಾನ ಅವರು ಸಿಸಿಟಿವಿ ವಿಡಿಯೊದೊಂದಿಗೆ ಟ್ವೀಟ್‌ ಮಾಡಿದ್ದಾರೆ.

ಜೈನ್‌ ಅವರು ಪಾದಗಳಿಗೆ ಮಸಾಜ್‌ ಮಾಡಿಸಿಕೊಳ್ಳುತ್ತಿರುವ ಸಿಸಿಟಿವಿ ವಿಡಿಯೊ ಸೋರಿಕೆಯಾದ ಬೆನ್ನಲ್ಲೇ, ಅದು ಹಳೆಯ ವಿಡಿಯೊ. ಜೈಲಿನ ಮೇಲ್ವಿಚಾರಕ ಅಜಿತ್‌ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೈನ್‌ ಅವರು ಜೈಲಿನೊಳಗೆ ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ವೇಳೆ ಸಾಕ್ಷಿಯ ರೂಪದಲ್ಲಿ ಸಿಸಿಟಿವಿ ವಿಡಿಯೊಗಳನ್ನು ಒದಗಿಸಿತ್ತು. ಸಿಸಿಟಿವಿ ದೃಶ್ಯಗಳು ಸೋರಿಕೆಯಾಗಿರುವುದರ ಹಿಂದೆ ತಮ್ಮ ಕೈವಾಡ ಇಲ್ಲ ಎಂದು ದೆಹಲಿ ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT