ಶನಿವಾರ, ಸೆಪ್ಟೆಂಬರ್ 26, 2020
27 °C

ಬಿಹಾರ: ಸ್ವಂತ ದುಡ್ಡಿನಿಂದ ಸೇತುವೆ ಕಟ್ಟಿಕೊಂಡ ಹಳ್ಳಿ ಜನ

ಎಎನ್ಐ Updated:

ಅಕ್ಷರ ಗಾತ್ರ : | |

ಗಯಾ (ಬಿಹಾರ): ಜಿಲ್ಲೆಯ ಬುಧೌಲ್ ಎಂಬ ಹಳ್ಳಿಯ ಜನರು ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆಯಿಂದಲೇ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಹಳ್ಳಿಯ ಜನರು ಹೇಳುವ ಪ್ರಕಾರ ಕಳೆದ 30 ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು ಎನ್ನಲಾಗಿದೆ.

ಸಾಮಾಜಿಕ ಕಾರ್ಯಕರ್ತ ಚಿತ್ರಾಂಜನ್‌ ಕುಮಾರ್‌ ಎನ್ನುವವರು, ‘ಇಲ್ಲಿನ ನಿವಾಸಿಗಳು ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಅವರ ಮನವಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇತ್ತೀಚೆಗೆ ಪಂಚಾಯಿತಿ ಸಭೆ ನಡೆಸಿದ ಜನರು, ಸೇತುವೆ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಿದರು’ ಎಂದಿದ್ದಾರೆ.

ಮುಂದುವರಿದು, ‘ಹಳ್ಳಿಯ ಜನರು ಅಗತ್ಯ ಸರಕುಗಳನ್ನು ಒಟ್ಟುಗೂಡಿಸಿದ್ದಾರೆ. ಕೆಲವರು ಕಾರ್ಮಿಕರಾಗಿ ದುಡಿಯುತ್ತಿದ್ದು, ಕಾಮಗಾರಿ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ಹಳ್ಳಿಯ ಪಕ್ಕದಲ್ಲೇ ನದಿ ಹರಿಯುತ್ತಿರುವುದರಿಂದ ಜನರು ಪಕ್ಕದ ಊರಿಗೆ ಹೋಗಲು ಸುಮಾರು 15 ಕಿ.ಮೀ ದೂರ ಸಾಗಬೇಕಿತ್ತು. ಸದ್ಯ ನದಿಗೆ ಅಡ್ಡಲಾಗಿ ಈ ನೇತುವೆ ನಿರ್ಮಿಸುತ್ತಿರುವುದರಿಂದ, ಪಕ್ಕದ ಊರಿಗೆ ಹೋಗಲು ಇದ್ದ ದೂರ ಕೇವಲ ಒಂದು ಕಿ.ಮೀ ಇಳಿಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು