ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರಿಗೆ ‘ವಿಐಪಿ’ ಭದ್ರತೆ

ಉತ್ತರ ಪ್ರದೇಶ, ಪಂಜಾಬ್‌ ವಿಧಾನಸಭೆ ಚುನಾವಣೆ
Last Updated 16 ಫೆಬ್ರುವರಿ 2022, 21:09 IST
ಅಕ್ಷರ ಗಾತ್ರ

ನವದೆಹಲಿ: ವಿಧಾನಸಭಾ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಬಿಜೆಪಿಯ20ಕ್ಕಿಂತಲೂಹೆಚ್ಚು ನಾಯಕರಿಗೆ ಕೇಂದ್ರ ಸರ್ಕಾರವು ಗಣ್ಯರಿಗೆ ನೀಡುವ ಭದ್ರತೆ (ವಿಐಪಿ) ಒದಗಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರ ವಿರುದ್ಧ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಬಘೆಲ್ ಅವರಿಗೆ ‘ಝಡ್‌’ ಶ್ರೇಣಿಯ ಭದ್ರತೆ ಒದಗಿಸಲಾಗಿದೆ.ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಬಘೆಲ್‌ ಅವರ ವಾಹನದ ಮೇಲೆ ಎಸ್‌ಪಿಯ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಮಂಗಳವಾರ ತಡರಾತ್ರಿ ಬಿಜೆಪಿ ಆರೋಪಿಸಿತ್ತು. ಹೀಗೆ ಆರೋಪಿಸಿದ ಮರುದಿನವೇ ಈ ಘೋಷಣೆ ಮಾಡಲಾಗಿದೆ. ಭದ್ರತೆ ಪಡೆದಿರುವ ನಾಯಕರಲ್ಲಿ ಕೆಲವರಿಗೆ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಮಾತ್ರ ಭದ್ರತೆ ನೀಡಲಾಗಿದೆ. ಇನ್ನೂ ಕೆಲವರಿಗೆ ಚುನಾವಣೆ ನಂತರವೂ ಭದ್ರತೆ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ (ಸಿಆರ್‌ಪಿಎಫ್‌) ಭದ್ರತೆ ಒದಗಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಬಘೆಲ್‌ ಜೊತೆಗೆ ದೆಹಲಿಯ ಬಿಜೆಪಿ ಸಂಸದ, ಗಾಯಕ ಹಂಸರಾಜ್‌ ಹಂಸ್‌ ಅವರಿಗೂ ಝಡ್‌ ಶ್ರೇಣಿಯ ಭದ್ರತೆ ನೀಡಲಾಗಿದೆ.ಉತ್ತರ ಪ್ರದೇಶದ ಭದೋಹಿಯ ಸಂಸದ ರಮೇಶ್‌ ಚಂದ್‌ ಬಿಂದ್‌ ಅವರಿಗೆ ‘ಎಕ್ಸ್‌’ ಶ್ರೇಣಿಯ ಭದ್ರತೆ ನೀಡಲಾಗಿದೆ.ಸುಮಾರು 20 ರಾಜಕೀಯ ನಾಯಕರಿಗೆ ಸಿಆರ್‌ಪಿಎಫ್‌ನ ಭದ್ರತೆ ಒದಗಿಸಲಾಗಿದೆ.

ಪಂಜಾಬ್‌ನಲ್ಲಿ ಸುಖ್ವಿಂದರ್‌ ಸಿಂಗ್‌ ಬಿಂದ್ರಾ, ಎಸ್‌ಎಡಿ (ಸಂಯುಕ್ತ) ಪಕ್ಷದ ನಾಯಕ ಮತ್ತು ಅಭ್ಯರ್ಥಿ ಪರ್ಮಿಂದರ್‌ ಸಿಂಗ್‌ ದಿಂಡ್ಸಾ ಮತ್ತು ಅವ್ತಾರ್‌ ಸಿಂಗ್‌ ಝಿರಾ ಅವರಿಗೆ ಭದ್ರತೆ ನೀಡಲಾಗಿದೆ. ಮಾ.10ರಂದು ಮತ ಎಣಿಕೆ ಮುಗಿದ ಬಳಿಕ ಇವರ ಭದ್ರತೆ ಹಿಂಪಡೆ
ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT