ನವದೆಹಲಿ: ವಿಸ್ತಾರಾ ವಿಮಾನಯಾನ ಸಂಸ್ಥೆಯು ಬೆಂಗಳೂರು ಮತ್ತು ಹೈದರಾಬಾದ್ ನಡುವೆಯೂ ಮನೆಯಿಂದ ಮನೆಗೆ ಲಗೇಜ್ ರವಾನಿಸುವ ಸೇವೆ ಆರಂಭಿಸುವ ಚಿಂತನೆ ನಡೆಸಿದೆ.
‘ಮಾರ್ಚ್ 13ರಂದು ವಿಸ್ತಾರಾ ವಿಮಾನಯಾನ ಸಂಸ್ಥೆಯುಲಗೇಜ್ ವರ್ಗಾವಣೆ ಕಂಪನಿ ಕಾರ್ಟರ್‌ಎಕ್ಸ್ ಸಹಭಾಗಿತ್ವದಲ್ಲಿ ದೆಹಲಿ–ಮುಂಬೈ ವಿಮಾನಗಳಲ್ಲಿ ಲಗೇಜ್ ವಿತರಣೆ ಸೇೆವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದೆ. ಗ್ರಾಹಕರು ನೀಡಿದ ಅಭಿಪ‍್ರಾಯ ಮತ್ತು ವಿಮರ್ಶೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಎರಡನೇ ಹಂತದಲ್ಲಿ ಹೈದರಾಬಾದ್ ಮತ್ತು ಬೆಂಗಳೂರಿಗೂ ವಿಸ್ತರಿಸುವ ಚಿಂತನೆ ನಡೆಸಲಾಗಿದೆ’ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
‘ಈ ಸೇವೆಯಡಿ ಗ್ರಾಹಕರ ಮನೆಯಿಂದ ಲಗೇಜ್ ಅನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಅವುಗಳನ್ನು ಸ್ಯಾನಿಟೈಸ್ ಮಾಡಿ, ಪ್ಯಾಕ್ ಮಾಡಲಾಗುತ್ತದೆ. ಲಗೇಜ್ ತನ್ನ ಸರಿಯಾದ ಜಾಗವನ್ನು ತಲುಪುವ ತನಕ ಅದರ ಬಗ್ಗೆ ಸದಾ ಮೇಲ್ವಿಚಾರಣೆ ವಹಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.