ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌: ವಿಐಟಿಗೆ ದೇಶದಲ್ಲಿ 9ನೇ ಸ್ಥಾನ

ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿಯ ಶ್ರೇಯಾಂಕಪಟ್ಟಿಯಲ್ಲಿ ವಿಶ್ವದಲ್ಲಿ 346ನೇ ಸ್ಥಾನ
Last Updated 9 ಏಪ್ರಿಲ್ 2022, 15:04 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯುಎಸ್ (ಕ್ವಾಕ್ವೆರೆಲ್ಲಿ ಸೈಮಂಡ್ಸ್) ವರ್ಲ್ಡ್ ಯೂನಿವರ್ಸಿಟಿಯು 2022ರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಷಯದಲ್ಲಿ ನೀಡುವ ಶ್ರೇಯಾಂಕ ಪಟ್ಟಿಯಲ್ಲಿ ತಮಿಳುನಾಡಿನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ವಿಐಟಿ) ವಿಶ್ವದಲ್ಲಿ 346ನೇ ಹಾಗೂ ಭಾರತದಲ್ಲಿ 9ನೇ ಸ್ಥಾನಕ್ಕೆ ಪಡೆದುಕೊಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ವಿಐಟಿಯು 2022ರ ಕ್ಯುಎಸ್‌ ವರ್ಲ್ಡ್ ಯೂನಿವರ್ಸಿಟಿಯ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಕ್ಯುಎಸ್ ಪ್ರತಿವರ್ಷ ಕಲೆ ಮತ್ತು ಮಾನವಿಕ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಜೀವವಿಜ್ಞಾನ ಮತ್ತು ಔಷಧ, ನೈಸರ್ಗಿಕ ವಿಜ್ಞಾನ, ಸಾಮಾಜಿಕ ವಿಜ್ಞಾನ ಹಾಗೂ ನಿರ್ವಹಣೆ ಈ ಐದು ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳ ಶ್ರೇಯಾಂಕವನ್ನು ಪ್ರಕಟಿಸುತ್ತದೆ.

ಈ ವರ್ಷ ಕ್ಯುಎಸ್ ಏಳು ವಿಷಯಗಳನ್ನು ಪ್ರಕಟಿಸಿದ್ದು, ಹೆಚ್ಚುವರಿಯಾಗಿ ಪ್ರಕಟಿಸಲಾದ ಕಂಪ್ಯೂಟರ್ ಸೈನ್ಸ್ ಮತ್ತು ಇನ್‌ಫಾರ್ಮೇಷನ್ ಸಿಸ್ಟಮ್ಸ್ ಹಾಗೂ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಷಯಗಳಲ್ಲಿ ವಿಐಟಿಯು ದೇಶದಲ್ಲಿ 8ನೇ ಸ್ಥಾನವನ್ನು ಪಡೆದಿವೆ.

ಕ್ಯುಎಸ್ ವರ್ಲ್ಡ್ ಯುನಿವರ್ಸಿಟಿಯು ನೀಡುವ ಶ್ರೇಯಾಂಕವು ನಿರ್ದಿಷ್ಟ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ವಿಶ್ವವಿದ್ಯಾಲಯಗಳನ್ನು ಗುರುತಿಸಲು ಸಹಾಯವಾಗುತ್ತದೆ.

ಕೇಂದ್ರ ಸರ್ಕಾರದ ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ನಲ್ಲಿ ವಿಐಟಿ 12ನೇ ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT