ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿರುದ್ಧ ಕೆಟ್ಟ ದೃಷ್ಟಿಯಿಂದ ನೋಡಬಾರದೆಂದು ಬ್ರಹ್ಮೋಸ್‌ ಅಭಿವೃದ್ಧಿ: ಸಚಿವ

Last Updated 26 ಡಿಸೆಂಬರ್ 2021, 15:21 IST
ಅಕ್ಷರ ಗಾತ್ರ

ಲಖನೌ: ‘ಯಾವುದೇ ದೇಶದ ಮೇಲೆ ದಾಳಿ ಮಾಡುವ ಉದ್ದೇಶದಿಂದ ನಾವು ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುತ್ತಿಲ್ಲ. ಬೇರೆ ಯಾವುದೇ ದೇಶವು ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂಬುದು ಇದರ ಉದ್ದೇಶವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೊತೆಗೆ ಲಖನೌನಲ್ಲಿ ರಕ್ಷಣಾ ತಂತ್ರಜ್ಞಾನಗಳು ಮತ್ತು ಪರೀಕ್ಷಾ ಕೇಂದ್ರ ಹಾಗೂ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕಕ್ಕೆ ಭಾನುವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ‘ಅಣ್ವಸ್ತ್ರ ಶಕ್ತ ಭಾರತದ ವಿರುದ್ಧ ಯಾರೊಬ್ಬರೂ ಕೆಟ್ಟ ದೃಷ್ಟಿಯಿಂದ ನೋಡಬಾರದು ಎಂಬುದೇ ಕ್ಷಿಪಣಿ ಅಭಿವೃದ್ಧಿಯ ಉದ್ದೇಶ’ ಎಂದು ತಿಳಿಸಿದರು.

‘ನಾವು ತಯಾರಿಸುತ್ತಿರುವ ಬ್ರಹ್ಮೋಸ್ ಕ್ಷಿಪಣಿ, ಇತರ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಉಪಕರಣಗಳು ಬೇರೆ ಯಾವುದೇ ದೇಶದ ಮೇಲೆ ದಾಳಿ ಮಾಡಲು ಅಲ್ಲ. ಯಾವುದೇ ದೇಶದ ಮೇಲೆ ದಾಳಿ ಮಾಡುವುದು ಅಥವಾ ಯಾವುದೇ ದೇಶದ ಒಂದು ಇಂಚು ಭೂಮಿಯನ್ನು ಕಬಳಿಸುವುದು ಭಾರತದ ಉದ್ದೇಶವಲ್ಲ’ ಎಂದು ಹೇಳಿದರು.

ಪಾಕಿಸ್ತಾನವನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, ‘ಕೆಲವು ವರ್ಷಗಳ ಹಿಂದೆ ನಮ್ಮಿಂದ ಬೇರ್ಪಟ್ಟಿದ್ದರೂ ಭಾರತದ ವಿರುದ್ಧವಾಗಿ ಅದರ ಉದ್ದೇಶಗಳು ಯಾವಾಗಲೂ ಏಕೆ ಕೆಟ್ಟದ್ದಾಗಿವೆ ಎಂದು ನನಗೆ ತಿಳಿದಿಲ್ಲ. ಉರಿ ಮತ್ತು ಪುಲ್ವಾಮಾದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದ್ದಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT