ಶನಿವಾರ, ಜುಲೈ 2, 2022
27 °C

‘ಮಹಾರಾಷ್ಟ್ರದ ಜಲಾಶಯಗಳಲ್ಲಿ ಶೇಕಡ 37ರಷ್ಟು ನೀರಿನ ಸಂಗ್ರಹ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ (ಪಿಟಿಐ): ರಾಜ್ಯದ ಜಲಾಶಯಗಳಲ್ಲಿ ಪ್ರಸ್ತುತ ಶೇಕಡ 37ರಷ್ಟು ನೀರಿನ ಸಂಗ್ರಹವಿದ್ದು, ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಪ್ರದೇಶಗಳಿಗೆ 401 ಟ್ಯಾಂಕರ್‌ಗಳು ನೀರನ್ನು ಸರಬರಾಜು ಮಾಡುತ್ತಿವೆ ಎಂದು ಮಹಾರಾಷ್ಟ್ರದ ಸರ್ಕಾರ ತಿಳಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಕಚೇರಿ ‘ಸಾರ್ವಜನಿಕರಿಗೆ ನಿರಂತರವಾದ ನೀರು ಪೂರೈಕೆ ಹಾಗೂ ವಿತರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರತವಾಗಿದೆ’ ಎಂದು ತಿಳಿಸಿದೆ.

‘ರಾಜ್ಯದಾದ್ಯಂತ 455 ಗ್ರಾಮಗಳಿಗೆ ಹಾಗೂ 1,001 ಕುಗ್ರಾಮಗಳಿಗೆ ಒಟ್ಟು 401 ಟ್ಯಾಂಕರ್‌ಗಳ ಮೂಲಕ  ನೀರನ್ನು ಪೂರೈಸಲಾಗಿದೆ. ಇಲ್ಲಿಯವರೆಗೆ ನಾಗಪುರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಅಗತ್ಯ ಎದುರಾಗಿಲ್ಲ’ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು