ಶುಕ್ರವಾರ, ಅಕ್ಟೋಬರ್ 2, 2020
20 °C

ಕೋವಿಡ್‌: ಹಿರಿಯ ಕಮ್ಯುನಿಸ್ಟ್ ನಾಯಕ ಶ್ಯಾಮಲ್‌ ಚಕ್ರವರ್ತಿ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ಸಿಪಿಎಂ ನಾಯಕ ಶ್ಯಾಮಲ್ ಚಕ್ರವರ್ತಿ(76) ಅವರು ಕೋಲ್ಕತ್ತದಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ ಕೋವಿಡ್‌ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಪಶ್ಚಿಮ ಬಂಗಾಳ ಸಿಪಿಎಂ, 'ಕಾಮ್ರೇಡ್ ಶ್ಯಾಮಲ್ ಚಕ್ರವರ್ತಿಯವರ ನಿಧನದ ಬಗ್ಗೆ ನಾವು ತೀವ್ರ ದುಃಖ ವ್ಯಕ್ತಪಡಿಸುತ್ತೇವೆ. ಅವರು ಹಿರಿಯ ಟ್ರೇಡ್ ಯೂನಿಯನ್ ಮುಖಂಡ, ಮಾಜಿ ಸಚಿವರು ಮತ್ತು ಸಿಪಿಎಂನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಇಂದು ದೇಶದಲ್ಲಿ ಕಾರ್ಮಿಕ ವರ್ಗ ಮತ್ತು ಎಡ ಚಳುವಳಿಯು ಒಂದು ಪ್ರಮುಖ ಧ್ವನಿಯನ್ನು ಕಳೆದುಕೊಂಡಿದೆ' ಎಂದು ತಿಳಿಸಿದೆ.

ಶ್ಯಾಮಲ್‌ ಚಕ್ರವರ್ತಿ ಅವರ ಸಾವಿಗೆ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಹಿರಿಯ ನಾಯಕ, ಮಾಜಿ ಸಂಸತ್ ಸದಸ್ಯ ಮತ್ತು ಬಂಗಾಳದ ಮಾಜಿ ಸಚಿವ ಶ್ಯಾಮಲ್ ಚಕ್ರವರ್ತಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು' ಎಂದು ಟ್ವೀಟ್‌ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು