ಚೀನಾದಿಂದ ಭಾರತೀಯರ ಅಪಹರಣ: ಲಭ್ಯವಾಗದ ಮಾಹಿತಿ

ಇಟಾನಗರ: ‘ಭಾರತ–ಚೀನಾ ಗಡಿಯ ಅಪ್ಪರ್ ಸುಬಾನ್‌ಸಿರಿ ಜಿಲ್ಲೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಐವರು ಭಾರತೀಯ ಯುವಕರನ್ನು ಅಪಹರಿಸಿದ್ದು, ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಇನ್ನೂ ದೊರೆತಿಲ್ಲ’ ಎಂದು ಅರುಣಾಚಲ ಪ್ರದೇಶದ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶುಕ್ರವಾರ ಕಾಡಿನಲ್ಲಿ ಬೇಟೆಯಾಡಲು ಹೋಗಿದ್ದ ಗ್ರಾಮದ ಐವರನ್ನು ಚೀನಾ ಅಪಹರಿಸಲಾಗಿದೆ. ಈ ಬಗ್ಗೆ ಯುವಕರ ಕುಟುಂಬದವರು ಸಾಮಾಜಿಕ ಮಾಧ್ಯಮಗಳಲ್ಲಿ ನಾಪತ್ತೆಯಾಗಿರುವ ಕುರಿತು ಪೋಸ್ಟ್ ಹಾಕಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯುವಕರ ಜತೆ ಇತರರೂ ಕಾಡಿಗೆ ತೆರಳಿದ್ದರು. ಅವರಲ್ಲಿ ಇಬ್ಬರು ಗ್ರಾಮಕ್ಕೆ ಮರಳಿದ್ದು, ಪಿಎಲ್‌ಎ ಯುವಕರನ್ನು ಅಪಹರಿಸಿರುವ ಕುರಿತು ಮಾಹಿತಿ ನೀಡಿದ್ದರು.
ಅರುಣಾಚಲ ಪ್ರದೇಶದ ಪೂರ್ವ ಸಂಸದೀಯ ಕ್ಷೇತ್ರದ ಪ್ರತಿನಿಧಿ, ಕೇಂದ್ರ ಯುವಜನ ಹಾಗೂ ಕ್ರೀಡಾ ಖಾತೆ ಸಚಿವ ಕಿರೆನ್ ರಿಜಿಜು, ‘ಪಿಎಲ್ಎ ನ ಹಾಟ್‌ಲೈನ್ ಸಂದೇಶಕ್ಕಾಗಿ ಭಾರತೀಯ ಸೇನೆಯು ಕಾಯುತ್ತಿದೆ’ ಎಂದು ಹೇಳಿದ್ದಾರೆ.
ಭಾನುವಾರ ಟ್ವೀಟ್ ಮಾಡಿದ್ದ ಕಿರೆನ್ ‘ಭಾರತೀಯ ಸೇನೆಯು ಈಗಾಗಲೇ ಪಿಎಲ್ಎಗೆ ತನ್ನ ಕಡೆಯಿಂದ ಹಾಟ್‌ಲೈನ್ ಸಂದೇಶ ಕಳಿಸಿದೆ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ’ ಎಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.