ಗುರುವಾರ , ಅಕ್ಟೋಬರ್ 1, 2020
20 °C

ಈ ವಾರ ವಿಶ್ವದಲ್ಲಿ 2 ಕೋಟಿ ತಲುಪಲಿದೆ ಕೋವಿಡ್‌–19 ಪ್ರಕರಣಗಳು

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ವಿಶ್ವದಲ್ಲಿ ಈ ವಾರದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ 2 ಕೋಟಿ ತಲುಪಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 7.50 ಲಕ್ಷ ಮೀರಲಿದೆ ಎಂದು ಊಹಿಸಲಾಗಿದೆ. 

ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಬ್ಲ್ಯುಎಚ್‌ಒ ಅಧ್ಯಕ್ಷ ‌ಟೆಡ್ರೋಸ್ ಅಧಾನೊಮ್ ಘೆಬ್ರೆಯಸಸ್, ‘ಈ ಅಂಕಿ ಅಂಶಗಳ ಹಿಂದೆ ಸಾಕಷ್ಟು ನೋವುಗಳಿವೆ. ಹೀಗಿದ್ದರೂ, ನಂಬಿಕೆಯಿಂದ ನಾವು ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದರು. ನ್ಯೂಜಿಲೆಂಡ್‌ ರಾಷ್ಟ್ರವನ್ನು ಉದಾಹರಣೆಯನ್ನಾಗಿಸಿದ ಟೆಡ್ರೋಸ್‌, ‘ಸೋಂಕು ಹರಡದಂತೆ ತಡೆಯಲು ರಾಷ್ಟ್ರದ ನಾಯಕರು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು. ಜನರೂ ಹೊಸ ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕು. ನ್ಯೂಜಿಲೆಂಡ್‌ನಲ್ಲಿ ಕಳೆದ ನೂರು ದಿನದಿಂದ ಯಾವುದೇ ಸೋಂಕು ಹರಡಿದ  ವರದಿಯಾಗಿಲ್ಲ. ಇದು ಶ್ಲಾಘನೀಯ’ ಎಂದರು. 

‘ಸೋಂಕು ಹರಡದಂತೆ ಬ್ರಿಟನ್‌ ಹಾಗೂ ಫ್ರಾನ್ಸ್‌ನಲ್ಲಿ ನಿಗದಿತ ಲಾಕ್‌ಡೌನ್ ನಿಯಮ ಹಾಗೂ ಮುಖಗವಸು ನಿಯಮದ ಕ್ರಮಗಳೂ ರಾಷ್ಟ್ರಗಳ ಉತ್ತಮ ಕ್ರಮಗಳಿಗೆ ಉದಾಹರಣೆ’ ಎಂದರು.  ‌  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು