ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಪಡಿತರ ಪಡೆಯಲು ಹೆಚ್ಚು ಮಕ್ಕಳನ್ನು ಹೆರಬಾರದೇಕೆ: ತೀರಥ್‌ ಸಿಂಗ್‌‌

Last Updated 21 ಮಾರ್ಚ್ 2021, 20:22 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಯುವತಿಯರು ಹರಿದ ಜೀನ್ಸ್‌ ತೊಡುವ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌, ಪಡಿತರ ಕುರಿತಂತೆ ಭಾನುವಾರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೈನಿತಾಲ್‌ನ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಪಿಡುಗಿನ ಈ ಸಮಯದಲ್ಲಿ ಹೆಚ್ಚು ಪಡಿತರ ಪಡೆಯುವ ಸಲುವಾಗಿ ಜನರು ಹೆಚ್ಚು ಮಕ್ಕಳನ್ನು ಹೆರಬೇಕಿತ್ತು’ ಎಂದು ಹೇಳಿದ್ದಾರೆ.

‘ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 5 ಕೆ.ಜಿ ಧಾನ್ಯ ನೀಡಲಾಗುತ್ತದೆ. 10 ಜನ ಮಕ್ಕಳಿರುವವರಿಗೆ 50 ಕೆ.ಜಿ. ಧಾನ್ಯ ಸಿಗುತ್ತದೆ. 20 ಜನರಿರುವ ಕುಟುಂಬಕ್ಕೆ ಒಂದು ಕ್ವಿಂಟಲ್‌ ಸಿಗುತ್ತದೆ’ ಎಂದು ಹೇಳಿದ್ದಾರೆ.

‘ಸಮಯ ಇದ್ದಾಗಲೂ ನೀವು ಇಬ್ಬರು ಮಕ್ಕಳನ್ನು ಮಾತ್ರ ಹೆತ್ತಿರಿ. ಈಗಿನ ನಿಮ್ಮ ಸ್ಥಿತಿಗೆ ಯಾರನ್ನು ದೂಷಿಸಲು ಸಾಧ್ಯ. ನೀವ್ಯಾಕೆ 20 ಮಕ್ಕಳನ್ನು ಹೆರಲಿಲ್ಲ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT