ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆಗೆ ಸರ್ಕಾರದ ಬಳಿ ₹80,000 ಕೋಟಿ ಲಭ್ಯವಿರಲಿದೆಯೇ?–ಅದಾರ್ ಪೂನಾವಾಲಾ

Last Updated 26 ಸೆಪ್ಟೆಂಬರ್ 2020, 15:15 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್‌ ಲಸಿಕೆ ತಯಾರಿಕೆ ಮತ್ತು ವಿತರಣೆಯ ಸವಾಲುಗಳನ್ನು ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಿಇಒ ಅದಾರ್‌ ಪೂನಾವಾಲಾ ಮುಂದಿಟ್ಟಿದ್ದಾರೆ. ಸೆರಮ್‌ ಇನ್‌ಸ್ಟಿಟ್ಯೂಟ್‌ ದೇಶದಲ್ಲಿ ಆಕ್ಸ್‌ಫರ್ಡ್‌ನ ಕೋವಿಡ್‌ ಲಸಿಕೆ 'ಕೋವಿಶೀಲ್ಡ್‌' ಕ್ಲಿನಿಕಲ್‌ ಟ್ರಯಲ್‌ ನಡೆಸುತ್ತಿದೆ.

ಭಾರತ ಸರ್ಕಾರದ ಬಳಿ ಕೋವಿಡ್‌ ಲಸಿಕೆಗಾಗಿ ₹80,000 ಕೋಟಿ ಇದೆಯೇ? ಎಂದು ಅದಾರ್‌ ಪೂನಾವಾಲಾ ಪ್ರಶ್ನಿಸಿದ್ದಾರೆ.

'ಮುಂದಿನ ಒಂದು ವರ್ಷಗಳ ವರೆಗೆ ಭಾರತ ಸರ್ಕಾರದ ಬಳಿ ₹80,000 ಕೋಟಿ ಲಭ್ಯವಿರಲಿದೆಯೇ? ಏಕೆಂದರೆ, ಆರೋಗ್ಯ ಸಚಿವಾಲಯವು ಲಸಿಕೆ ಖರೀದಿಸಲು ಮತ್ತು ಭಾರತದ ಪ್ರತಿಯೊಬ್ಬರಿಗೂ ವಿತರಿಸಲು ಅಷ್ಟು ಮೊತ್ತದ ಅವಶ್ಯಕತೆ ಇದೆ. ಇದು ನಮ್ಮ ಮುಂದಿನ ಬಗೆಹರಿಸಬೇಕಾದ ಸವಾಲು' ಎಂದು ಟ್ವೀಟಿಸಿದ್ದಾರೆ.

'ನಾನು ಈ ಪ್ರಶ್ನೆ ಕೇಳಲು ಕಾರಣವೇನೆಂದರೆ, ನಾವು ಯೋಜನೆ ರೂಪಿಸಿಬೇಕಿದೆ ಹಾಗೂ ಭಾರತ ಮತ್ತು ಹೊರದೇಶಗಳಲ್ಲಿ ಲಸಿಕೆ ತಯಾರಿಸುವವರಿಂದ ನಮಗೆ ಅಗತ್ಯವಿರುವ ಲಸಿಕೆ ಪೂರೈಕೆ ಸೇವೆಗಳನ್ನು ಪಡೆದುಕೊಳ್ಳಲು ಮುಂದುವರಿಯಬೇಕಿದೆ' ಎಂದಿದ್ದಾರೆ.

ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಫಾರ್ಮಾ ಅಭಿವೃದ್ಧಿ ಪಡಿಸಿರುವ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯನ್ನು ಸೆರಮ್‌ ಇನ್‌ಸ್ಟಿಟ್ಯೂಟ್‌ ಭಾರತದಲ್ಲಿ ಪ್ರಯೋಗಕ್ಕೆ ಒಳಪಡಿಸಿದೆ. ಪ್ರಸ್ತುತ ಮಾನವರ ಮೇಲೆ ಲಸಿಕೆಯ ಎರಡು ಮತ್ತು 3ನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ.

ಕೋವಿಶೀಲ್ಡ್‌ ಲಸಿಕೆ ಭಾರತದಲ್ಲಿ ₹1,000 ದರದಲ್ಲಿ ಸಿಗಬಹುದು. ದೇಶದಲ್ಲಿ ತಿಂಗಳಿಗೆ 3 ಕೋಟಿ ಡೋಸ್‌ ಲಸಿಕೆ ಸಿಗಬಹುದು, ಇಡೀ ದೇಶಕ್ಕೆ ಅದರ ಪೂರೈಕೆಯಾಗಲು ಎರಡು ವರ್ಷಗಳೇ ಬೇಕಾಗಬಹುದು ಎಂದು ಪೂನಾವಾಲಾ ಈ ಹಿಂದೆ ಸಂದರ್ಶನದಲ್ಲಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

'ಮೂರು ಲಸಿಕೆಗಳು ಪರೀಕ್ಷೆಯ ವಿವಿಧ ಹಂತಗಳಲ್ಲಿವೆ. ವಿಜ್ಞಾನಿಗಳು ಮುಂದುವರಿಯುಂತೆ ತಿಳಿಸಿದರೆ, ತಯಾರಿಕೆಗೆ ನಾವು ಯೋಜನೆ ಸಹಿತ ಸಜ್ಜಾಗಿದ್ದೇವೆ. ಅತ್ಯಂತ ಕಡಿಮೆ ಸಮಯದಲ್ಲಿ ಪ್ರತಿ ಭಾರತೀಯರಿಗೆ ಲಸಿಕೆ ತಲುಪಿಸಲು ಮಾರ್ಗಸೂಚಿ ಸಿದ್ಧವಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು.

ಪ್ರಸ್ತುತ ಭಾರತದಲ್ಲಿ ನಿತ್ಯ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ 80,000 ದಾಟುತ್ತಿದ್ದು, ಲಸಿಕೆಯು ಅತ್ಯಗತ್ಯವಾಗಿದೆ. ಭಾರತ್ ಬಯೋಟೆಕ್‌ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್‌ ಮತ್ತು ಝೈಡಸ್‌ ಕ್ಯಾಡಿಲಾದ ಲಸಿಕೆಯು ಕ್ಲಿನಿಕಲ್‌ ಟ್ರಯಲ್‌ 2 ಮತ್ತು 3ನೇ ಹಂತಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT