ಮಂಗಳವಾರ, ಅಕ್ಟೋಬರ್ 27, 2020
28 °C
ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ

ಲಾನಿನೊ ದುರ್ಬಲ: ಈ ಬಾರಿ ತೀವ್ರ ಚಳಿ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಲಾ ನಿನೊ‘ ಪರಿಸ್ಥಿತಿ ಚಾಲ್ತಿಯಲ್ಲಿರುವ ಕಾರಣ ಈ ಬಾರಿಯ ಚಳಿಗಾಲವು ಮತ್ತಷ್ಟು ಶೀತದಿಂದ ಕೂಡಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಬುಧವಾರ ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯೋಜಿಸಿದ್ದ ‘ಕೋಲ್ಡ್‌ ವೇವ್‌ ರಿಸ್ಕ್‌ ರಿಡಕ್ಷನ್‌’ ಎಂಬ ವಿಷಯದ ವೆಬಿನಾರ್‌ ನಲ್ಲಿ ಮಾತನಾಡಿದ ಅವರು, ‘ಹವಾಮಾನ ಬದಲಾವಣೆಯಿಂದ ಉಷ್ಣಾಂಶ ಹೆಚ್ಚಾಗುತ್ತದೆ ಎಂಬ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಲಾನಿನೊ ಪರಿಸ್ಥಿತಿಯಿಂದಾಗಿ ಹವಾಮಾನ ಬದಲಾವಣೆಯಾಗುತ್ತಿದ್ದು,  ಚಳಿ ಹೆಚ್ಚಾಗಲಿದೆ’ ಎಂದು ಹೇಳಿದರು.

‘ಲಾ ನಿನೊ ಪರಿಸ್ಥಿತಿ ದುರ್ಬಲವಾಗುತ್ತಿದ್ದು, ಈ ವರ್ಷ ಅತಿಯಾದ ಚಳಿಗಾಲವಾಗಬಹುದೆಂದು ಅಂದಾಜಿಸಿದ್ದೇವೆ. ಎಲ್‌ನಿನೊ ಮತ್ತು ಲಾನಿನೊ ಪರಿಸ್ಥಿತಿಯ ವ್ಯತ್ಯಾಸದಿಂದ ಜಾಗತಿಕ ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಾನಿನೊ ಪರಿಸ್ಥಿತಿಯು ಶೀತ ಹವಾಮಾನಕ್ಕೆ ಅನೂಕೂಲಕರವಾಗಿದೆ. ಅದೇ ಎಲ್‌ನಿನೊ ಪರಿಸ್ಥಿತಿ ಪ್ರತಿಕೂಲವಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.