ಸೋಮವಾರ, ಜನವರಿ 25, 2021
15 °C

ಮಹಾರಾಷ್ಟ್ರ ಸಚಿವನ ವಿರುದ್ಧ ಅತ್ಯಾಚಾರ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಆದರೆ, ತಮ್ಮ ದೂರನ್ನು ಮುಂಬೈ ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

ಆದರೆ, ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಎನ್‌ಸಿಪಿ ಮುಖಂಡ, ದೂರು ನೀಡಿರುವ ಮಹಿಳೆ ಮತ್ತು ಆಕೆಯ ಸಹೋದರಿ ನನಗೆ ಬ್ಲ್ಯಾಕ್‌ಮೇಲ್ ತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇವೇಳೆ, ದೂರುದಾರೆಯ ಸಹೋದರಿ ಜೊತೆ ಸಂಬಂಧ ಹೊಂದಿದ್ದೆ. ಆಕೆಗೆ ಇಬ್ಬರು ಮಕ್ಕಳು ಸಹ ಇರುವುದಾಗಿ ಮುಂಡೆ ಹೇಳಿದ್ದಾರೆ.

ಜನವರಿ 10 ರಂದು ಮುಂಬೈ ಪೊಲೀಸ್ ಕಮಿಷನರ್‌ಗೆ 10 ರಂದು ಪತ್ರ ಬರೆದಿರುವ 37 ವರ್ಷದ ಮಹಿಳೆ, ಮುಂಡೆ 2006 ರಲ್ಲಿ ಪದೇ ಪದೇ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ. ಈ ಮೊದಲು ತಾನು ಒಶಿವಾರಾ ಪೊಲೀಸರನ್ನು ಸಂಪರ್ಕಿಸಿದ್ದೇನೆ. ಆದರೆ, ನನ್ನ ದೂರನ್ನು ಸ್ವೀಕರಿಸಲಾಗಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
.
ಆದರೆ, ಮಹಿಳೆಯ ಆರೋಪಗಳು ನನ್ನ ವಿರುದ್ಧದ ಬ್ಲಾಕ್ ಮೇಲ್ ತಂತ್ರದ ಭಾಗವಾಗಿವೆ. ನಾನು ಆಕೆಯ ಸಹೋದರಿ ಜೊತೆ ಸಂಬಂದ ಹೊಂದಿದ್ದು, ಎರಡು ಮಕ್ಕಳಿಗೆ ಎಂದು ಮುಂಡೆ ಹೇಳಿದ್ದಾರೆ.

ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಮುಂಡೆ, ನನ್ನ ವಿವಾಹೇತರ ಸಂಬಂಧದ ಬಗ್ಗೆ ನನ್ನ ಪತ್ನಿ, ಕುಟುಂಬ ಮತ್ತು ಸ್ನೇಹಿತರಿಗೆ ತಿಳಿದಿದೆ. ಎರಡು ಮಕ್ಕಳನ್ನೂ ನನ್ನ ಕುಟುಂಬ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾನು ಸಂಬಂಧ ಹೊಂದಿದ್ದ ಮಹಿಳೆ 2019ರಿಂದಲೂ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲಿಸರಿಗೆ ದೂರು ಕೊಟ್ಟಿದ್ದರೆ. ನನ್ನ ವಿರುದ್ಧ ಮಾನಹಾನಿಕರ ವಿಷಯವನ್ನು ಹರಡದಂತೆ ತಡೆ ನೀಡಲು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾಗಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು