ಮಂಗಳವಾರ, ಜೂನ್ 15, 2021
25 °C

ಕೋವಿಡ್‌ನಿಂದ ಪತಿ ಸಾವು: ಗಂಗೆಗೆ ಹಾರಿದ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಕೋವಿಡ್‌–19ನಿಂದ ನಿಧನರಾದ ಪತಿಯ ಅಗಲುವಿಕೆಯನ್ನು ಸಹಿಸಲಾಗದೆ ಪತ್ನಿ ಗಂಗಾ ನದಿಗೆ ಹಾರಿ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ.

ಅಂಜುದೇವಿ ಸಾವನ್ನಪ್ಪಿದ ಮಹಿಳೆ. ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌ ಕುಮಾರ್ ರೈ ಅವರು ಕೋವಿಡ್‌ನಿಂದಾಗಿ ಭಾನುವಾರ ರಾತ್ರಿ ನಿಧನ ಹೊಂದಿದ್ದರು. ಅಜಿತ್ ಅವರ ಪತ್ನಿ ಅಂಜುದೇವಿಗೆ ಪತಿಯ ಅಗಲಿಕೆ ತಡೆಯಲಾಗಲಿಲ್ಲ. ಪತಿಯ ಅಂತ್ಯಸಂಸ್ಕಾರ ಮುಗಿದ ಒಂದು ದಿನದ ಬಳಿಕ ಅಂಜುದೇವಿ ಗಂಗಾ ನದಿಗೆ ಹಾರಿ ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ ಅವರ ಶವ ಪತ್ತೆಯಾಗಿದೆ.

ದಂಪತಿ ಸಾವನ್ನಪ್ಪಿದ ಎರಡನೇ ಪ್ರಕರಣ

ಕೋವಿಡ್‌ನಿಂದಾಗಿ ದಂಪತಿ ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ. ಪಟ್ನಾದಲ್ಲಿ ರೈಲ್ವೆ ಉದ್ಯೋಗಿಯಾಗಿದ್ದ ಅತುಲ್ ಲಾಲ್ ಅವರ ಪತ್ನಿ ತೂಲಿಕಾ ಅವರಿಗೆ ಈಚೆಗೆ ಕೋವಿಡ್ ಇರುವುದು ದೃಢಪಟ್ಟಿತ್ತು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಸಿಟ್ಟಿನ ಭರದಲ್ಲಿ ಅತುಲ್ ಪತ್ನಿಯ ಗಂಟಲು ಸೀಳಿ ಮಕ್ಕಳೆದುರೇ ಹತ್ಯೆ ಮಾಡಿದ್ದರು. ನಂತರ ತಮ್ಮ ಮನೆಯ ನಾಲ್ಕನೇ ಅಪಾರ್ಟ್‌ಮೆಂಟಿನಿಂದ ಜಿಗಿದು ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ತೂಲಿಕಾ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದರಿಂದ ನೆರೆಹೊರೆಯವರು ಅವರ ಜಗಳ ಬಿಡಿಸಲು ಮುಂದಾಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು