ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಲೈಂಗಿಕ ಆಸಕ್ತಿ ಇತ್ತೆಂದು ಅತ್ಯಾಚಾರಿಯ ಕ್ಷಮಿಸಲಾಗದು: ಕೇರಳ ಹೈಕೋರ್ಟ್

Last Updated 21 ಅಕ್ಟೋಬರ್ 2021, 14:48 IST
ಅಕ್ಷರ ಗಾತ್ರ

ಕೊಚ್ಚಿ:ಮಹಿಳೆಗೆ ಲೈಂಗಿಕ ಆಸಕ್ತಿ ಅಧಿಕ ಇದೆ ಎಂದಾಕ್ಷಣಯಾರೊಬ್ಬರನ್ನೂ ಅತ್ಯಾಚಾರ ಆರೋ‍ಪದಿಂದ ಕ್ಷಮಿಸಲಾಗದು, ವಿಶೇಷವಾಗಿತಂದೆಯಾದವನು ತನ್ನ ಮಗಳಿಗೆ ‘ರಕ್ಷಕ ಮತ್ತು ಆಶ್ರಯಧಾತ’ ಎಂದೇ ಪರಿಗಣಿಸಲಾಗಿರುವುದರಿಂದ ಆತನ ಅಪರಾಧವನ್ನು ಮನ್ನಿಸಲಾಗದು ಎಂದು ಕೇರಳ ಹೈಕೋರ್ಟ್ ಹೇಳಿದೆ.

ತನ್ನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪಿ ತಂದೆಯನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಮೂರ್ತಿ ಆರ್. ನಾರಾಯಣ ಪಿಶರಡಿ ಈ ತೀರ್ಪು ನೀಡಿದರು.‌

ಸಂತ್ರಸ್ತೆಯ ತಂದೆ ‘ತನ್ನ ಮಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದರಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ. ನಾನು ಮುಗ್ಧ’ ಎಂದು ವಾದಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ‘ಒಬ್ಬ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದರೆ, ರಕ್ಷಕನೇ ಭಕ್ಷಕನಾದ, ಖಜಾನೆ ಕಾವಲುಗಾರನೇ ದರೋಡೆಕೋರನಾಗುವುದಕ್ಕಿಂತಲೂ ಕೆಟ್ಟದು. ತಂದೆಯಾದವನು ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗುವಷ್ಟು ಘೋರ ಅಪರಾಧ ಇನ್ನೊಂದು ಇರಲಾರದು’ ಎಂದು ಅಭಿಪ್ರಾಯಪಟ್ಟರು.

ಸಂತ್ರಸ್ತೆಯ ಆರೋಪಿ ತಂದೆ ನಾನು ಮುಗ್ಧ ಎಂದು ವಾದಿಸಿರುವುದನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ಲೈಂಗಿಕ ದೌರ್ಜನ್ಯದ ಪರಿಣಾಮವಾಗಿ 2013ರ ಮೇನಲ್ಲಿ ಜನಿಸಿದ ಮಗುವಿನ ಡಿಎನ್ಎ ವಿಶ್ಲೇಷಣೆಯೂ ಸಂತ್ರಸ್ತೆಯ ತಂದೆಯೇ ಶಿಶುವಿನ ಜೈವಿಕ ತಂದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.

ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿ, 12 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

2012ರಜೂನ್‌ನಿಂದ 2013ರಜನವರಿ ನಡುವೆ ಅತ್ಯಾಚಾರ ನಡೆದಾಗ ಸಂತ್ರಸ್ತೆ ಅಪ್ರಾಪ್ತ ವಯಸ್ಕಳು ಮತ್ತು ಸಂತ್ರಸ್ತೆಗೆ ತಂದೆಯಿಂದ ಬೆದರಿಕೆ ಇದೆ ಎನ್ನುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್‌ ಕೈಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT