ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಪುರುಷರಿಗಿಂತ ಶಕ್ತಿಶಾಲಿಗಳು: ರಾಹುಲ್‌ ಗಾಂಧಿ

Last Updated 22 ಮಾರ್ಚ್ 2021, 14:08 IST
ಅಕ್ಷರ ಗಾತ್ರ

ಕೊಚ್ಚಿ: ಇಲ್ಲಿರುವ ಸೇಂಟ್‌ ತೆರೇಸಾ ಕಾಲೇಜಿಗೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಅವರು, ಮಹಿಳೆಯರು ಪುರುಷರಿಗಿಂತ ಶಕ್ತಿಶಾಲಿಗಳು ಎಂದು ಹೇಳಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆ ಪ್ರಚಾರದ ಸಲುವಾಗಿ ಕೇರಳಕ್ಕೆ ಆಗಮಿಸಿರುವ ರಾಹುಲ್‌ ವಿದ್ಯಾರ್ಥಿಗಳ ಮುಂದೆ ಜಪಾನ್‌ನ ಸಮರ ಕಲೆ ಐಕಿಡೊದ ಕೆಲ ಕೌಶಲಗಳನ್ನು ಪ್ರದರ್ಶಿಸಿದರು.

ವಯನಾಡ್‌ ಕ್ಷೇತ್ರದ ಸಂಸದರೂ ಆಗಿರುವ ರಾಹುಲ್‌ ಸಂವಾದದ ವೇಳೆ, ʼಗಂಡಸರು ಎಂದಿಗೂ ಹೇಳದ ರಹಸ್ಯವೊಂದನ್ನು ನಾನು ನಿಮಗೆ ಹೇಳುತ್ತೇನೆ. ಮಹಿಳೆಯರು ಪುರುಷರಿಗಿಂತ ಸಾಕಷ್ಟು ಶಕ್ತಿಶಾಲಿಗಳುʼ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿ ಕಾರಿದ ಅವರು,ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ದೇಶದಲ್ಲಿ ಇಂಧನ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದರು.

ಮುಂದುವರಿದು, ಕೇಂದ್ರದ ದುರಾಡಳಿತದಿಂದಾಗಿ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿದರು.

140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್‌ 6 ರಂದು ಚುನಾವಣೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಮೇ 2 ರಂದು ನಡೆಯಲಿದೆ. ಕಾಂಗ್ರೆಸ್‌ ಪಕ್ಷವು 91 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT