ದೆಹಲಿ | ಚರಂಡಿಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆ

ನವದೆಹಲಿ: ಪ್ರೇಯಸಿಯ ದೇಹವನ್ನು ತುಂಡು ತುಂಡು ಮಾಡಿ ಎಸೆದ ಮೆಹ್ರೌಲಿಯ ಭೀಕರ ಕೊಲೆ ಪ್ರಕರಣ ಜೀವಂತವಾಗಿರುವಾಗಲೇ, ದೆಹಲಿಯಲ್ಲಿ ಮತ್ತೊಂದು ಇಂತಹದೇ ಕೊಲೆ ನಡೆದಿದೆ.
ಸೂಟ್‌ಕೇಸ್‌ನಲ್ಲಿ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ದೆಹಲಿಯ ಪಂಜಾಬಿ ಭಾಗ್‌ನಲ್ಲಿ ಘಟನೆ ಸೂಟ್‌ಕೇಸ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೂಟ್‌ಕೇಸ್‌ನಿಂದ ವಾಸನೆ ಬರುತ್ತಿದೆ ಎಂದು ಕಂಟ್ರೋಲ್ ರೂಮ್‌ಗೆ ಸಾರ್ವಜನಿಕರು ನೀಡಿದ ದೂರನ್ನು ಆಧರಿಸಿ, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಥಳೀಯ ಚಾಲಕರ ಸಹಾಯದಿಂದ ಚರಂಡಿಯಲ್ಲಿದ್ದ ಸೂಟ್‌ಕೇಸ್ ಅನ್ನು ಮೇಲೆತ್ತಿ, ತೆರೆದಾಗ ಮಹಿಳೆಯೊಬ್ಬರ ಶವ ತೀವ್ರ ಕೊಳೆತ ಸ್ಥಿತಿಯಲ್ಲಿ ಇರುವುದು ಪತ್ತೆಯಾಗಿದೆ.
ಮಹಿಳೆಯ ವಯಸ್ಸು 28–30 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಶವದ ಗುರುತು ಪತ್ತೆಯಾಗಿಲ್ಲ.
ಮರಣೋತ್ತರ ಪರೀಕ್ಷೆಗೆ ಶವವನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.