ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಚನಾ ಸಭೆ: ಯುವಜನತೆಗೆ ಅರಿವು ಅಗತ್ಯ ಎಂದ ಪ್ರಧಾನಿ ಮೋದಿ

ಸಂವಿಧಾನ ರಚನಾ ಸಭೆಗೆ 75 ವರ್ಷಗಳು
Last Updated 9 ಡಿಸೆಂಬರ್ 2021, 12:00 IST
ಅಕ್ಷರ ಗಾತ್ರ

ನವದೆಹಲಿ: 75 ವರ್ಷಗಳ ಹಿಂದೆ ಡಿ.9ರಂದು ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತ್ತು. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಈ ಸಂವಿಧಾನ ರಚನಾ ಕೂಟದ ನಡಾವಳಿಗಳು ಮತ್ತು ಈ ಸಭೆಯಲ್ಲಿ ಭಾಗವಹಿಸಿದ್ದ ಧೀಮಂತ ವ್ಯಕ್ತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ಯುವಜನತೆಗೆ ಅವರು ಒತ್ತಾಯಿಸಿದರು.

1946ರ ಡಿಸೆಂಬರ್‌ 9 ರಂದು ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತು. ಇದು 1947ರ ಆಗಸ್ಟ್‌ 14 ರಂದು ಸಾರ್ವಭೌಮ ಸಂಸ್ಥೆಯಾಗಿ ಹೊರಹೊಮ್ಮಿತು.

‘75 ವರ್ಷಗಳ ಹಿಂದೆ ಇಂದು ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತು. ಭಾರತದ ವಿವಿಧ ಭಾಗಗಳಿಂದ, ವಿವಿಧ ಹಿನ್ನೆಲೆಯ ಮತ್ತು ವಿಭಿನ್ನ ಸಿದ್ಧಾಂತಗಳನ್ನು ಹೊಂದಿದ ಪ್ರತಿಷ್ಠಿತ ವ್ಯಕ್ತಿಗಳು ಭಾರತಕ್ಕೆ ಒಂದು ಉತ್ತಮ ಸಂವಿಧಾನ ನೀಡುವ ಏಕಮಾತ್ರ ಗುರಿಯೊಂದಿಗೆ ಒಟ್ಟಾಗಿ ಸೇರಿದ್ದರು. ಈ ಮಹನೀಯರಿಗೆ ನಮನಗಳು’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT