ಬುಧವಾರ, ಜುಲೈ 28, 2021
21 °C

ವಿಶ್ವ ಯೋಗ ದಿನ: ಕೋವಿಡ್‌ ಸಂದರ್ಭದಲ್ಲಿ ಯೋಗ ತುಂಬಾ ಸಹಕಾರಿ- ರಾಷ್ಟ್ರಪತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಯೋಗ ದಿನದ ಅಂಗವಾಗಿ ಸೋಮವಾರ ದೇಶದ ಜನತೆಗೆ ಶುಭಾಶಯ ಕೋರಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಯೋಗಾಭ್ಯಾಸ ತುಂಬಾ ಸಹಕಾರಿ‘ ಎಂದು ಹೇಳಿದ್ದಾರೆ.

‘ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಯೋಗವೂ ಒಂದಾಗಿದೆ‘ ಎಂದು ಅವರು ಹೇಳಿದ್ದಾರೆ.

#ಇಂಟರ್ನ್ಯಾಷನಲ್ ಡೇ ಆಫ್‌ ಯೋಗಾ ವಿಷಸ್‌, ಎಂಬ ಟ್ಯಾಗ್‌ಲೈನ್‌ಲ್ಲಿ ರಾಷ್ಟ್ರಪತಿ ಅವರು ಯೋಗ ಪ್ರದರ್ಶನ ಮಾಡುತ್ತಿರುವ ಚಿತ್ರದೊಂದಿಗೆ ರಾಷ್ಟ್ರಪತಿ ಭವನ ಯೋಗ ದಿನದ ಶುಭಾಶಯವನ್ನು ಟ್ವೀಟ್‌ ಮಾಡಿದೆ.

‘ಸಮಗ್ರ ಆರೋಗ್ಯ ಮತ್ತು ಸಂತೋಷವನ್ನು ಸಾಧಿಸಲು ಮನಸ್ಸು-ದೇಹವನ್ನು ಒಟ್ಟುಗೂಡಿಸುವ ಈ ಯೋಗಾಭ್ಯಾಸ, ಸಹಸ್ರಾರು ವರ್ಷಗಳಿಂದ ಲಕ್ಷಾಂತರ ಜನರಿಗೆ ಪ್ರಯೋಜನ ನೀಡಿದೆ. ವಿಶ್ವಕ್ಕೆ ಭಾರತ ನೀಡಿರುವ ಅತ್ಯುತ್ತಮ ಉಡುಗೊರೆಗಳಲ್ಲಿ ಯೋಗವೂ ಇದು. ಇದು ಕೋವಿಡ್ -19 ಸಾಂಕ್ರಾಮಿಕದ ಕಾಲದಲ್ಲಿ ವಿಶೇಷವಾಗಿ ನೆರವಾಗುತ್ತದೆ‘ ಎಂದು ರಾಷ್ಟ್ರಪತಿ ಭವನ ಟ್ವೀಟ್‌ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು