ಬುಧವಾರ, ಮೇ 25, 2022
28 °C

ಪಾಕಿಸ್ತಾನದ ಬೆಂಬಲಿಗ, ಜಿನ್ನಾರ ಆರಾಧಕ: ಅಖಿಲೇಶ್‌ ಕುರಿತು ಯೋಗಿ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಪಾಕಿಸ್ತಾನದ ಬೆಂಬಲಿಗ ಮತ್ತು ಜಿನ್ನಾರ ಆರಾಧಕ ಎಂದು ಯೋಗಿ ಆದಿತ್ಯನಾಥ್‌ ಕರೆದಿದ್ದಾರೆ.

ಈ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಯೋಗಿ, ‘ಅಖಿಲೇಶ್‌ ಜಿನ್ನಾರ ಆರಾಧಕ. ನಾವು ಸರ್ದಾರ್ ಪಟೇಲ್‌ರ ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ. ನಾವು ಭಾರತ ಮಾತೆಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇವೆ’ ಎಂದು ಆದಿತ್ಯನಾಥ್ ಹೇಳಿದ್ದಾರೆ.

‘ಅವರು(ಸಮಾಜವಾದಿ ಪಕ್ಷ) ಅಧಿಕಾರದಲ್ಲಿದ್ದಾಗ ರಾಮಭಕ್ತರ ಮೇಲೆ ಗುಂಡು ಹಾರಿಸಲಾಯಿತು. ಕನ್ವರ್ ಯಾತ್ರೆಗಳನ್ನು ರದ್ದುಗೊಳಿಸಲಾಯಿತು. ನಾವು ಅಧಿಕಾರದಲ್ಲಿದ್ದಾಗ ಶ್ರೀ ರಾಮಲಲ್ಲಾ ಕನಸು ನನಸಾಯಿತು. ಹೆಲಿಕಾಪ್ಟರ್‌ನಿಂದ ಕನ್ವರ್‌ ಯಾತ್ರಿಗಳ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ದೀಪೋತ್ಸವ ಮತ್ತು ರಂಗೋತ್ಸವಗಳು ಉತ್ತರ ಪ್ರದೇಶದ ಹೆಗ್ಗುರುತುಗಳಾದವು’ ಎಂದು ಯೋಗಿ ಟ್ವೀಟಿಸಿದ್ದಾರೆ. 

ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಎಸ್‌ಪಿ ನಡುವೆ ಪೈಪೋಟಿ ಏರ್ಪಟ್ಟಿದೆ. 

ಇದನ್ನೂ ಓದಿ– ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಿಗೆ ‘ಜಾಟ್‌’ ಆಕ್ರೋಶದ ಬಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು