ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೈಕೋವ್-ಡಿ ಕೋವಿಡ್ ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ: ಮನಸುಖ್ ಮಾಂಡವೀಯ

Last Updated 21 ಆಗಸ್ಟ್ 2021, 17:38 IST
ಅಕ್ಷರ ಗಾತ್ರ

ಅಹಮದಾಬಾದ್: ಕೋವಿಡ್ 19 ವಿರುದ್ಧದ ಝೈಕೋವ್-ಡಿ ಲಸಿಕೆಯ ತುರ್ತು ಬಳಕೆಗೆ ಅಧಿಕಾರ ನೀಡಲಾಗಿದ್ದು, ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಗುಜರಾತಿನಲ್ಲಿ ರ ‘ಜನಾಶೀರ್ವಾದ ಯಾತ್ರೆ‘ಯ ಕೊನೆಯ ದಿನ ಹೇಳಿದರು.

ಬೋಟಾಡ್ ಜಿಲ್ಲೆಯ ಗಡಾದ ದೇವಸ್ಥಾನದಲ್ಲಿ ಸ್ವಾಮಿನಾರಾಯಣ ದೇವರ ದರ್ಶನದಿಂದ ಹಿಡಿದು ಮಾಂಡವೀಯ ಅವರು ಇಂದು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಝೈಡಸ್ ಕ್ಯಾಡಿಲಾ ತಯಾರಿಸಿದ ಝೈಕೋವ್-ಡಿ ಕೋವಿಡ್ -19 ಲಸಿಕೆಗೆ ನೀಡಲಾದ ತುರ್ತು ಬಳಕೆಯ ದೃಢೀಕರಣದ ಕುರಿತು ಬೋಟಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಂಡವೀಯ, ಇದು ಕೋವಿಡ್ -19 ಗಾಗಿ ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದ್ದು, ಇದನ್ನು ಮೂರು ಡೋಸ್‌ಗಳಲ್ಲಿ ನೀಡಲಾಗುವುದು. 12 ವರ್ಷಕ್ಕಿಂತ ಮೇಲ್ಪಟ್ಟವರು ಸಹ ಲಸಿಕೆ ತೆಗೆದುಕೊಳ್ಳಬಹುದು’ಎಂದು ಹೇಳಿದರು.

ಕಂಪನಿಯು ಈಗಾಗಲೇ ಲಸಿಕೆಯ ಉತ್ಪಾದನೆಯನ್ನು ಆರಂಭಿಸಿದ್ದು ಅದು ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದರು.

ಝೈಡಸ್ ಕಂಪನಿಯ ಸ್ವದೇಶದಲ್ಲಿ ಅಭಿವೃದ್ಧಿಪಡಿಸಿದ ಸೂಜಿ ರಹಿತ ಮೂರು ಡೋಸ್‌ಗಳ ಕೋವಿಡ್ -19 ಲಸಿಕೆ ಝೈಕೋವ್-ಡಿಗೆ ಶುಕ್ರವಾರ ಔಷಧ ನಿಯಂತ್ರಕವು ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ದೇಶದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೊಡಲು ಅನುಮೋದನೆ ಪಡೆದ ಮೊದಲ ಲಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT