ಶುಕ್ರವಾರ, ಸೆಪ್ಟೆಂಬರ್ 25, 2020
26 °C

Covid-19 Vaccine Update | ಇಂದಿನಿಂದ ಝೈಡೂಸ್ ವ್ಯಾಕ್ಸಿನ್ 2ನೇ ಹಂತದ ಪರೀಕ್ಷೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಪರಿಣಾಮಕಾರಿ ಲಸಿಕೆ ಎಂದು ಹೇಳಲಾಗುತ್ತಿರುವ ಝೈಕೊವ್-ಡಿ (ZyCoV-D) ಲಸಿಕೆಯ 2ನೇ ಹಂತದ ಪರೀಕ್ಷೆ ಇಂದಿನಿಂದ (ಆಗಸ್ಟ್ 6) ಆರಂಭವಾಗಲಿದೆ ಎಂದು ಕಂಪನಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

'ಕೋವಿಡ್-19 ತಡೆಯುವ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಝೈಕೊವ್-ಡಿ ಮೊದಲ ಹಂತದ ಪರೀಕ್ಷೆಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾಗಿದೆ. ಜುಲೈ 15ರಂದು ಆರಂಭವಾದ ಮೊದಲ ಹಂತದ ಪರೀಕ್ಷೆಗಳಲ್ಲಿ ಆರೋಗ್ಯವಂತರಿಗೆ ಲಸಿಕೆಯನ್ನು ನೀಡಿ ತಪಾಸಣೆ ನಡೆಸಲಾಯಿತು. ಇದು ಪರಿಣಾಮಕಾರಿ ಎಂದು ನಿರೂಪಿತಗೊಂಡಿತು. 6ನೇ ಆಗಸ್ಟ್‌ನಿಂದ ಕಂಪನಿಯು 2ನೇ ಹಂತದ ಪರೀಕ್ಷೆ ಆರಂಭಿಸಲಿದೆ. 1000 ಮಂದಿಗೆ ಲಸಿಕೆ ನೀಡಿ, ಅವರ ದೇಹ ಪ್ರತಿಕ್ರಿಯಿಸುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು' ಎಂದು ಝೈಡೂಸ್ ಕ್ಯಾಡಿಲಾ ಕಂಪನಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಲಸಿಕೆಯನ್ನು ಪ್ರಾಣಿಗಳಿಗೆ ನೀಡಿ ಪರೀಕ್ಷಿಸಿದ ಪ್ರಿ ಕ್ಲಿನಿಕಲ್ ಅಧ್ಯಯನ ವೇಳೆ ಇದು ಸುರಕ್ಷಿತ, ರೋಗ ನಿರೋಧಕ ಶಕ್ತಿಯನ್ನು ನಿರೀಕ್ಷೆಯಂತೆ ಹೆಚ್ಚಿಸುವ ಮತ್ತು ದೇಹಕ್ಕೆ ಹಾನಿಯುಂಟುಮಾಡದ ಅಂಶಗಳು ಸಾಬೀತಾದವು. ಲಸಿಕೆ ನೀಡಿದ ಪ್ರಾಣಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಮನುಷ್ಯರ ಮೇಲೆ ಔಷಧಿ ಪ್ರಯೋಗಿಸಲು ಕಂಪನಿಗೆ ಕೇಂದ್ರ ಔಷಧ ನಿಯಂತ್ರಕರು ಜುಲೈ 2ರಂದು ಅನುಮತಿ ನೀಡಿದ್ದರು. ಫಲಿತಾಂಶಗಳನ್ನು ಕಂಪನಿಯು ಈವರೆಗೆ ಸಾರ್ವಜನಿಕಗೊಳಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು