ಮಂಗಳವಾರ, ಜೂಲೈ 7, 2020
27 °C
2011ರಿಂದಲೂ ಲಯನ್‌ ಏರ್‌ನಲ್ಲಿ ಕೆಲಸ ಮಾಡುತ್ತಿದ್ದ ಭವ್ಯೆ ಸುನೆಜಾ

ಇಂಡೊನೇಷ್ಯಾ: ಪತನವಾದ ವಿಮಾನ ಚಲಾಯಿಸುತ್ತಿದ್ದ ಪೈಲಟ್ ಭಾರತೀಯ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಜಕಾರ್ತ: ಇಂಡೊನೇಷ್ಯಾದಲ್ಲಿ ಸಮುದ್ರಕ್ಕೆ ಪತನಗೊಂಡ ವಿಮಾನದ ಪೈಲಟ್ ಆಗಿದ್ದವರು ಭಾರತದ ಮೂಲದ ಭವ್ಯೆ ಸುನೆಜಾ ಎಂಬುದು ತಿಳಿದುಬಂದಿದೆ. ಇಂಡೊನೇಷ್ಯಾ ರಾಜಧಾನಿ ಜಕರ್ತದಿಂದ ಸೋಮವಾರ ಬೆಳಿಗ್ಗೆ ಸುಮಾತ್ರಾದ ಪಾಂಗ್‌ಕಲ್ ಪಿನಾಗ್‌ ದ್ವೀಪಕ್ಕೆ ಹೊರಟಿದ್ದ ‘ಲಯನ್ ಏರ್‌ ಜೆಟಿ610’ ವಿಮಾನ ಸಮುದ್ರಕ್ಕೆ ಪತನಗೊಂಡಿತ್ತು.

‘ಜಕಾರ್ತ ಬಳಿ ಲಯನ್ ಏರ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ದುರದೃಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ವಿಪತ್ತು ಕೇಂದ್ರದ ಜತೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯ ಸಹಕಾರ ನೀಡುತ್ತಿದೆ’ ಎಂದು ಜಕಾರ್ತದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಭವ್ಯೆ ಸುನೆಜಾ ಅವರು 2011ರಿಂದಲೂ ಲಯನ್ ಏರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅದಕ್ಕೂ ಮುನ್ನ ಎಮಿರೇಟ್ಸ್‌ನಲ್ಲಿ ಟ್ರೈನೀ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದರು. ಸುನೆಜಾ ಅವರು 6,000 ಗಂಟೆ ವಿಮಾನ ಚಲಾಯಿಸಿದ್ದ ಅನುಭವ ಹೊಂದಿದ್ದು, ಅವರ ಸಹ ಪೈಲಟ್ ಆಗಿದ್ದ ಇಂಡೊನೇಷ್ಯಾದ ಹಾರ್ವಿನೊ 5,000ಕ್ಕೂ ಹೆಚ್ಚು ಗಂಟೆ ವಿಮಾನ ಚಲಾಯಿಸಿದ್ದ ಅನುಭವ ಹೊಂದಿದ್ದರು ಎಂದು ಲಯನ್ ಏರ್‌ ಸಂಸ್ಥೆ ತಿಳಿಸಿದೆ.

ದೆಹಲಿ ಮೂಲದವರಾದ ಸುನೆಜಾ ಮಯೂರ್‌ ವಿಹಾರ್‌ನ ಅಹಲ್ಕಾನ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದ್ದರು.

ಜಕಾರ್ತದಿಂದ ಹೊರಟ ಲಯನ್ ಏರ್‌ ವಿಮಾನ ಟೇಕಾಫ್ ಆದ 13 ನಿಮಿಷಗಳ ಬಳಿಕ ಸಂಪರ್ಕ ಕಡಿದುಕೊಂಡಿತ್ತು. ದುರಂತದ ವೇಳೆ 189 ಪ್ರಯಾಣಿಕರು ವಿಮಾನದಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: 189 ಪ್ರಯಾಣಿಕರಿದ್ದ ಇಂಡೊನೇಷ್ಯಾ ವಿಮಾನ ಸಮುದ್ರಕ್ಕೆ ಪತನ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು