ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಅರ್ಚಕರ ಹತ್ಯೆ ಪ್ರಕರಣದಲ್ಲಿ ಮತ್ತೆ ನಾಲ್ವರ ಬಂಧನ

Last Updated 19 ಸೆಪ್ಟೆಂಬರ್ 2020, 14:49 IST
ಅಕ್ಷರ ಗಾತ್ರ

ಮಂಡ್ಯ: ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದ ಮೂವರು ಅರ್ಚಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೂ 9 ಮಂದಿಯನ್ನು ಬಂಧಿಸಿದ್ದು ₹ 4 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಸೆ.10ರಂದು ಘಟನೆ ನಡೆದ ನಂತರ ಸೆ.13ರಂದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಸೆ. 14ರಂದು ನಸುಕಿನಲ್ಲಿ ಮದ್ದೂರು ತಾಲ್ಲೂಕು ಸಾದೊಳಲು ಗೇಟ್‌ ಬಳಿ ಪ್ರಯಾಣಿಕರ ತಂಗುದಾಣದಲ್ಲಿ ಮಲಗಿದ್ದ ಮೂವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು. ಸೆ.18ರವರೆಗೂ ಕಾರ್ಯಾಚರಣೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಬೆಂಗಳೂರು ಲವಕುಶ ನಗರದ ಬಿ.ಎ.ಶಿವರಾಜು (30), ರಾಮನಗರ ಜಿಲ್ಲೆಯ ಸಿದ್ದಬೋವಿಪಾಳ್ಯದ ಮಂಜಪ್ಪ (38), ಮದ್ದೂರು ತಾಲ್ಲೂಕು ಬೆಳತೂರು ಗರೀಬಿ ಸೈಟ್‌ ನಿವಾಸಿ ಶಿವರಾಜ (25), ಪಾಂಡವಪುರ ತಾಲ್ಲೂಕು ಹರಳಹಳ್ಳಿಯ ಗಣೇಶ (20) ಬಂಧಿತರು.

ಹುಂಡಿಯಲ್ಲಿ ದೋಚಿದ್ದ ₹ 4,07,935 ನಗದು ಸೇರಿ ಆರೋಪಿಗಳಿಂದ 2 ಬೈಕ್‌, 2 ಸ್ಕೂಟರ್‌ ಹಾಗೂ ಟಾಟಾ ಮ್ಯಾಜಿಕ್‌ ಪ್ರಯಾಣಿಕರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

‘ಆರೋಪಿಗಳೆಲ್ಲರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಒಟ್ಟಾಗಿ ಸೇರಿ ಒಂದೂವರೆ ತಿಂಗಳಿಂದ ದೇವಾಲಯದ ಹುಂಡಿ ದರೋಡೆಗೆ ಯೋಜನೆ ರೂಪಿಸಿದ್ದರು. ಇಲ್ಲಿಯವರೆಗೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT