ಹಸುವಿನ ಹೊಟ್ಟೆಯಲ್ಲಿತ್ತು 40 ಕೆ.ಜಿ. ಪ್ಲಾಸ್ಟಿಕ್!

ಕೋಣಂದೂರು (ತೀರ್ಥಹಳ್ಳಿ ತಾ.): ಸಮೀಪದ ಹೊರಬೈಲ್ ಗ್ರಾಮದ ಸುಧೀರ್ ಭಟ್ ಅವರು ಸಾಕಿಕೊಂಡಿದ್ದ ಹಸುವಿನ ಹೊಟ್ಟೆಯಲ್ಲಿದ್ದ 40 ಕೆ.ಜಿ. ಪ್ಲಾಸ್ಟಿಕ್ ಅನ್ನು ಪಶು ವೈದ್ಯಾಧಿಕಾರಿ ಡಾ.ಆನಂದ್ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
ಮಲೆನಾಡು ತಳಿಯ ಈ ಹಸು ಕೆಲ ದಿನಗಳಿಂದ ಮೇವು ತಿನ್ನದೇ, ಮೆಲುಕು ಹಾಕದೇ ಹೊಟ್ಟೆ ಉಬ್ಬರಿಸಿತ್ತು. ಡಾ.ಆನಂದ್ ಪರೀಕ್ಷಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದು, 40 ಕೆ.ಜಿ.ಗೂ ಹೆಚ್ಚು ಮೇವು ರಸಮಿಶ್ರಿತ ಗಟ್ಟಿಯಾದ ಪ್ಲಾಸ್ಟಿಕ್ ಅನ್ನು ಹೊರ ತೆಗೆದಿದ್ದಾರೆ.
‘ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಮತ್ತು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಜಾನುವಾರು ಇಂತಹ ಆಪತ್ತಿಗೆ ಸಿಲುಕುತ್ತವೆ. ಜನರು ಪರಿಸರಕ್ಕೆ ಹಾನಿಯಾದ ಪ್ಲಾಸ್ಟಿಕ್ ಅನ್ನು ಮಿತಿಯಲ್ಲಿ ಬಳಸಬೇಕು. ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಮೂಕ ಪ್ರಾಣಿಗಳ ಜೀವಕ್ಕೆ ಸಂಚಕಾರ ತರದಂತೆ ಎಚ್ಚರ ವಹಿಸಬೇಕು’ ಎಂದೂ ಡಾ.ಆನಂದ ಸಲಹೆ ನೀಡಿದ್ದಾರೆ.
ಪಶು ವೈದ್ಯಕೀಯ ಸಹಾಯಕ ಸಚಿನ್, ಸುಧೀರ್ ಭಟ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.