ಗುರುವಾರ , ಜೂನ್ 24, 2021
25 °C

ಸರ್ಕಾರಿ ಆಸ್ಪತ್ರೆಗಳಿಗೆ 55 ಆಮ್ಲಜನಕ ಕಾನ್ಸನ್‌ಟ್ರೇಟರ್ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಇಲ್ಲಿನ ಜೆಎನ್‌ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದ್ದ ರಾಘವೇಂದ್ರ ಶೆಟ್ಟಿ ಅವರು ಅಮೆರಿಕದಲ್ಲಿರುವ ಭಾರತೀಯ ಸ್ನೇಹಿತರ ನೆರವಿನಿಂದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ 55 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ದೇಣಿಗೆ ಕೊಡಿಸಿದ್ದಾರೆ.

ಶಿವಮೊಗ್ಗದವರಾದ ರಾಘವೇಂದ್ರ 1993–97 ಬ್ಯಾಚ್ ವಿದ್ಯಾರ್ಥಿ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳಿಗೆ ಆಗುತ್ತಿರುವ ಸಮಸ್ಯೆ ಗಮನಿಸಿದ ಅವರು ಸ್ನೇಹಿತರ ಜತೆ ಚರ್ಚಿಸಿದ್ದಾರೆ. ಸ್ನೇಹಿತರ ಸಲಹೆಯಂತೆ ಅಮೆರಿಕದ ಒ2 ಫಾರ್ ಇಂಡಿಯಾ (O2 For India.Org) ಸಂಸ್ಥೆಗೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ಸಂಸ್ಥೆಯ ಸಿಇಒ ಸತೀಶ್ ಅಂಬಾಟಿ, ಶ್ರೀಶಾ ಅಂಬಾಟಿ, ಒಪೆಲ್‌ ಕನ್ಸಲ್ಟಿಂಗ್, ಹಮ್‌ ಶಿವಮೊಗ್ಗ ಗೆಳೆಯರ ಸಹಕಾರದಲ್ಲಿ ಕಾನ್ಸನ್‌ಟ್ರೇಟರ್‌ಗಳನ್ನು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಯೂನಿಟ್‌ ಬೆಲೆ ₹ 60 ಸಾವಿರ.

‘ರೋಗಿಗಳಿಗೆ ತುರ್ತಾಗಿ ಬಳಸಲು ಈ ಕಾನ್ಸನ್‌ಟ್ರೇಟರ್ ಸಹಕಾರಿ. ವಾತಾವರಣದಲ್ಲಿರುವ ಗಾಳಿಯನ್ನು ಹೀರಿ ಆಮ್ಲಜನಕವನ್ನು ಪ್ರತ್ಯೇಕಗೊಳಿಸುತ್ತದೆ. ಗ್ಯಾಸ್‌ಸ್ಟ್ರೀಮ್ ಮೂಲಕ ರೋಗಿಗೆ ನೀಡಬಹುದು’ ಎನ್ನುತ್ತಾರೆ ರಾಘವೇಂದ್ರ ಶೆಟ್ಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು