ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಂ ಭಾವದಿಂದ ಹೆಚ್ಚುತ್ತಿರುವ ದೌರ್ಜನ್ಯ’

Last Updated 10 ಡಿಸೆಂಬರ್ 2021, 22:41 IST
ಅಕ್ಷರ ಗಾತ್ರ

ಬೆಂಗಳೂರು: ‘ಮನುಷ್ಯರಲ್ಲಿ ಅಹಂ ಭಾವ ಹೆಚ್ಚುತ್ತಿದೆ. ಅದರಿಂದ ಕೌಟುಂಬಿಕ ಕಲಹಗಳು ಹಾಗೂ ದೌರ್ಜನ್ಯಗಳೂ ಏರುತ್ತಿವೆ’ ಎಂದು ವಕೀಲರ ಸಾಹಿತ್ಯ ಕೂಟದ ಉಪಾಧ್ಯಕ್ಷೆ ಬಿ.ಜೆ.ಜಿ.ಸತ್ಯಶ್ರೀ ಹೇಳಿದರು.

ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘ ಹಮ್ಮಿಕೊಂಡಿದ್ದ ‘ಮಹಿಳೆ ಮತ್ತು ಕಾನೂನು’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ‘ಗ್ರಾಮ ಸ್ವರಾಜ್‌’ ನನಸಾಗಿದ್ದರೆ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೈಹಿಕ ಹಾಗೂ ಮಾನಸಿಕ ದೌರ್ಜನ್ಯಗಳನ್ನು ತಡೆಯಬಹುದಿತ್ತು. ನಗರೀಕರಣ, ಜಾಗತೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ಮನುಷ್ಯ ಕೊಳ್ಳುಬಾಕುತನಕ್ಕೆ ಇಳಿದಿದ್ದಾನೆ. ಮಿತಿಮೀರಿದ ಸಂಪಾದನೆಗೆ ಕೈಒಡ್ಡುತ್ತಿದ್ದಾನೆ. ಜೊತೆಗೆ ದೌರ್ಜನ್ಯಗಳನ್ನೂ ಎಸಗುತ್ತಿದ್ದಾನೆ’ ಎಂದರು.

ಕನ್ನಡ ಯುವಜನ ಸಂಘದ ಕಾರ್ಯದರ್ಶಿ ಮಹಾಂತೇಶ್‌ ದೇಗಾವಿ, ಜಗದೀಶ್‌ ರೆಡ್ಡಿ, ರಾಜು, ಕೆ.ಎಸ್‌.ಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT